???????????????????????????????????? 
ಜಿಲ್ಲೆ

ಬನ್ನೇರುಘಟ್ಟ ಉದ್ಯಾನವನದ ಜಿರಾಫೆ ದತ್ತು ಪಡೆದ ನಿವೃತ್ತ ವಿಂಗ್ ಕಮಾಂಡರ್

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಆಗಮಿಸಿದ್ದ ಯದುನಂದನ ಹೆಸರಿನ ಜಿರಾಫೆಯನ್ನು ವಾಯುನೆಲೆಯ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಅವರು ದತ್ತು ಪಡೆದಿದ್ದಾರೆ.

ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿನ ಕೃಷ್ಣರಾಜ ಮತ್ತು ಬಬ್ಲಿ ಜೋಡಿಗೆ ಜನಿಸಿದ ಒಂದೂವರೆ ವರ್ಷದ ಗಂಡು ಜಿರಾಫೆಯನ್ನು ತಿಂಗಳ ಹಿಂದೆ ಉದ್ಯಾನವನಕ್ಕೆ ಕರೆತರಲಾಗಿತ್ತು.

ಮೊದಲ ಬಾರಿಗೆ ಉದ್ಯಾನವನದ ಜಿರಾಫೆ ದತ್ತು ಪಡೆಯಲಾಗಿದೆ. ಇದಕ್ಕಾಗಿ ಒಂದು ಲಕ್ಷ ರೂ. ಚೆಕ್ ನೀಡಿದ್ದಾರೆ. ಪ್ರಾಣಿಗಳನ್ನು ದತ್ತು ಪಡೆಯುವ ಪ್ರಕ್ರಿಯೆಯಿಂದ ಜನರಲ್ಲಿ ವನ್ಯಜೀವಿಗಳೆಡೆಗೆ ಪ್ರೀತಿ ಮತ್ತು ಆಸಕ್ತಿ ಮೂಡುವಂತಾಗುತ್ತದೆ ಹಾಗೂ ಸಂರಕ್ಷಣೆಗೆ ನಾಗರಿಕರನ್ನು ತೊಡಗಿಸ್ಳಲು ಇದು ಉತ್ತಮ ಪ್ರಕ್ರಿಯೆ ಎಂದು ಉದ್ಯಾನವನದ ಕಾರ‌್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ತಿಳಿಸಿದ್ದಾರೆ.

ಉದ್ಯಾನವನದಲ್ಲಿ ಪ್ರಾಣಿಗಳ ದತ್ತು ಸ್ವೀಕಾರದ ದರ ಮರುಪರಿಶೀಲಿಸಿದ ಬಳಿಕ ಸುಮಾರು 79 ಪ್ರಾಣಿ ಪ್ರಿಯರು 95 ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಇದರಿಂದ ಉದ್ಯಾನವನಕ್ಕೆ 15,50,500 ರೂ. ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.