ಜಿಲ್ಲೆ

ಬನಶಂಕರಿ ದೇವಿ ಮಾಂಗಲ್ಯ ಕಳವು

ಕಾಳಗಿ: ಇಲ್ಲಿನ ಜಗನ್ಮಾತೆ ಬನಶಂಕರಿ ದೇವಿ ದೇವಸ್ಥಾನದಲ್ಲಿ ದೇವಿ ಕೊರಳಲ್ಲಿದ್ದ ೧೫ ಗ್ರಾಂ. ಚಿನ್ನದ ಮಾಂಗಲ್ಯವನ್ನು ಶುಕ್ರವಾರ ಸಂಜೆ ಕಳವಾಗಿದೆ. ಸಂಜೆ ದೇವಿಗೆ ಪೂಜೆ ಸಲ್ಲಿಸಲು ರ‍್ಚಕ ಸುರೇಶ ಗುಂಡದ ದೇವಸ್ಥಾನಕ್ಕೆ ಬಂದಾಗ ಬಾಗಿಲ ಬೀಗ ಮುರಿದಿರುವುದನ್ನು ಕಂಡಿದ್ದಾರೆ. ಒಳಗೆ ಹೋಗಿ ನೋಡಿದಾಗ ದೇವಿಯ ಮಾಂಗಲ್ಯ ಮಾಯವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸರು ಹಾಗೂ ದೇವಸ್ಥಾನದ ಅಧ್ಯ ವೀರೇಶ ಕಣ್ಣಿ ಅವರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.