ಕೋಲಾರ/ವೇಮಗಲ್ : ದೇಶದಲ್ಲಿ ಇಂದಿಗೂ ಅನೇಕ ಸಹಕಾರಿ ಸಂಸ್ಥೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಾಗಿಲ್ಲ, ಆದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದೇಶಕ್ಕೆ ಮಾದರಿಯಾಗಲು ಆಡಳಿತ ಮಂಡಳಿಯ ಪರಿಶ್ರಮ ಹಾಗೂ ಬದ್ಧತೆ ಕಾರಣ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರಶಂಸಿಸಿದರು.
ತಾಲೂಕಿನ ವೇಮಗಲ್ ಸೊಸೈಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕಿಗೆ ಮರು ಜೀವ ನೀಡಿ, ಇಂದು ಪ್ರತಿ ಸೊಸೈಟಿಗಳ ಮೂಲಕ ಮಹಿಳೆಯರು, ರೈತರಿಗೆ 15ರಿಂದ 30 ಕೋಟಿ ರೂ. ಸಾಲ ನೀಡುತ್ತಿರುವುದು ಸಾಮಾನ್ಯ ವಿಷಯವಲ್ಲ ಎಂದರು.
ಡಿಸಿಸಿ ಬ್ಯಾಂಕನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ಏರಿಸಿದ್ದೀರ. ಈ ಸಾಧನೆ ಮುಂದುವರಿಯಬೇಕು, ಇಡೀ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಲು ಇನ್ನಷ್ಟು ಜವಾಬ್ದಾರಿಯಿಂದ ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದರು. ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಕೋಲಾರ ಜಿಲ್ಲೆಯ ಪರವಾಗಿ ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಶುಭ ಸೂಚಕ, ಇವರಿಂದ ಬ್ಯಾಂಕಿಗೆ ಹಾಗೂ ಜಿಲ್ಲೆಗೆ ಒಳ್ಳೆಯದಾಗಲಿ ಎಂದು ಅಭಿನಂದಿಸಿದರು.
ವೇಮಗಲ್‌ನಿಂದ ಕೋಲಾರಕ್ಕೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ, ರಸ್ತೆ ಅಭಿವದ್ದಿ ಕಾರ್ಯ ಶ್ರೀ ನಡೆಯಬೇಕಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅಗತ್ಯ ಹಣ ಬಿಡುಗಡೆ ವಾಡಿಸಿ ಎಂದು ಶಾಸಕ ಶ್ರೀನಿವಾಸಗೌಡರಿಗೆ ಮನವಿ ಮಾಡಿದರು.
ಬಡವರ ಕೆಲಸ: ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದು ಆ ಹಣವನ್ನು ವಾಣಿಜ್ಯ ಬ್ಯಾಂಕಿನಲ್ಲಿ ಠೇವಣಿ ಇಡುವ ಪಾಪದ ಕೆಲಸ ವಾಡಬೇಡಿ ಎಂಪಿಸಿಎಸ್ ವಹಿವಾಟು ನಮ್ಮಲ್ಲೇ ನಡೆಸಿ, ಸಾಲ ನೀಡುವುದು ನಾವು ಠೇವಣಿ ಬೇರೆ ಬ್ಯಾಂಕಿನಲ್ಲಿ ಏಕೆ ಇಡುತ್ತೀರಿ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪ್ರಶ್ನಿಸಿದರು. ಬ್ಯಾಂಕ್ ದೇಶಕ್ಕೆ ನಂ.1 ಆಗಿರುವುದು ಜವಾಬ್ದಾರಿ ಹೆಚ್ಚಿಸಿದೆ, ಇನ್ನು ಮುಂದೆಯೂ ಬಡವರು, ರೈತರು, ತಾಯಂದಿರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
ಬ್ಯಾಂಕ್ ನಿರ್ದೇಶಕರಾದ ಅನಿಲ್‌ಕುವಾರ್, ನಾಗನಾಳ ಸೋಮಣ್ಣ, ವೇಮಗಲ್ ಸೊಸೈಟಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ರಾಮಸ್ವಾಮಿ, ಸೊಸೈಟಿ ನಿರ್ದೇಶಕರಾದ ಬೋಚಣ್ಣ, ಚೌಡಪ್ಪ, ರವೀಂದ್ರ, ರಾಮಚಂದ್ರಪ್ಪ, ಚಲಪತಿ, ವೀರೇಗೌಡ,ರಾಮಣ್ಣ,ಮುನಿವೆಂಕಟಪ್ಪ, ಶ್ರೀನಿವಾಸಪ್ಪ, ಮಂಜುನಾಥ್, ವೈ.ಎಂ.ಮಂಜುನಾಥ್, ಸೊಸೈಟಿ ಸಿಇಒ ಶಂಕರಪ್ಪ, ಮಾಜಿ ಅಧ್ಯಕ್ಷ ಪಿ.ವೆಂಕಟೇಶ್, ಮುಖಂಡರಾದ ಬೈಚಪ್ಪ, ಬೆಳವಾರನಹಳ್ಳಿ ಆನಂದ್‌ಕುಮಾರ್, ರವಿಕುಮಾರ್, ಗ್ರಾಪಂ ಸದಸ್ಯ ರಮೇಶ್ ಇತರರಿದ್ದರು.
10 ವರ್ಷಗಳ ಹಿಂದೆ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇನ್ನೇನು ಮುಳುಗಿ ಹೋಯಿತು ಎಂದು ಭಾವಿಸಿದ್ದೆ, ಗೋವಿಂದಗೌಡ ಅಧ್ಯಕ್ಷರಾಗಲು ಮೊದಲಬಾರಿ ನಾನೂ ವಿರೋಧಿಸಿದ್ದೆ, ಆದರೆ ಬ್ಯಾಂಕ್ ಇಂದು ದೇಶದಲ್ಲೇ ನಂ.1 ಆಗಲು ಗೋವಿಂದಗೌಡ ಮತ್ತವರ ತಂಡ ಪಟ್ಟಿರುವ ಶ್ರಮ ಪ್ರಶಂಸನೀಯ. ಶ್ರೀನಿವಾಸಗೌಡ, ಶಾಸಕ