ಕೋಲಾರದ ಅಂತರಗಂಗೆ ರಸ್ತೆಯ ಶ್ರೀ ಚೌಡೇಶ್ವರಿ ಅಕಾಡೆಮಿಯಲ್ಲಿ ಸಾದಕ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ವೈದ್ಯ ಡಾ. ಬೀರೇಗೌಡ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಾಣಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ನಾಗಾನಂದ ಕೆಂಪರಾಜು ಇತರರು ಇದ್ದರು.  
ಜಿಲ್ಲೆ

ಬದುಕುವ ಶೈಲಿ ಅಳವಡಿಸಿಕೊಳ್ಳಿ

ಕೋಲಾರ

ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಬದುಕುವ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ವೈದ್ಯ ಡಾ. ಬೀರೇಗೌಡ ಅಭಿಪ್ರಾಯಪಟ್ಟರು

ನಗರದ ಅಂತರಗಂಗೆ ರಸ್ತೆಯ ಶ್ರೀ ಚೌಡೇಶ್ವರಿ ಅಕಾಡೆಮಿಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಪ್ರಬುದ್ಧ ನಾಗರೀಕರ ಸ್ನೇಹ ಬಳಗದ ಆಶ್ರಯದಲ್ಲಿ ಸೋಮವಾರ ಸಾದಕ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿ, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು. ಅವರ ಅಭಿರುಚಿಗಳಿಗೆ ಆದ್ಯತೆ ನೀಡಬೇಕು. ಮುಕ್ತವಾಗಿ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಬೇಕಾದ್ದು ನಾಗರಿಕ ಸಮಾಜದ ಜವಾಬ್ದಾರಿ. ವಿದ್ಯಾರ್ಥಿಗಳು ಸಮಾಜ ಗುರುತಿಸು ಕಾರ್ಯ ಮಾಡಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಮುರುಳೀಧರ ಮಾತನಾಡಿ, ಮಕ್ಕಳು ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜ್ಞಾನ ಸಹಜವಾಗಿ ಬೆಳೆಯುತ್ತದೆ. ಮಕ್ಕಳಿಗೆ ಭವಿಷ್ಯದ ಬಗ್ಗೆ ಸೂಕ್ತ ಮಾರ್ಗದರ್ಶನ ಅತ್ಯವಶ್ಯಕ ಎಂದರು.

ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ನಾಗಾನಂದ ಕೆಂಪರಾಜು ಮಾತಾನಾಡಿ, ವಿದ್ಯೆ ಯಾರ ಸ್ವತ್ತಲ್ಲ, ಕಠಿಣ ಶ್ರಮ, ಉತ್ತಮ ಮಾರ್ಗದರ್ಶನದಿಂದ ಎಲ್ಲರಿಗೂ ದಕ್ಕುತ್ತದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರ ಹಾಕಲು ಶಿಕ್ಷಕರು ಶ್ರಮಿಸಬೇಕು. ಇಂತಹ ಅಭಿನಂದನಾ ಸಮಾರಂಭಗಳನ್ನು ಏರ್ಪಡಿಸಿ ಅವರನ್ನು ಪದೆರೋತ್ಸಾಹಿಸಬೇಕು ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಾಣಪ್ಪ ಮಾತಾನಾಡಿ, ಮನುಷ್ಯ ಭೂಮಿಯ ಮೇಲೆ ಸಾಧನೆ ಮಾಡಿ ಹೋಗಬೇಕು. ಆ ನಿಟ್ಟಿನಲ್ಲಿ ನಾವು ಪರಿಶ್ರಮ ಪಡಬೇಕು. ಬದುಕನ್ನು ಅರ್ಥಪೂಣವಾಗಿ ಸಾಗಿಸಿದಾಗ ಜೀವನದಲ್ಲಿ ಸಾಧನೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಹಾಗಾಗಿ ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸಕ್ಕೆ ಕೊಡಿಸಬೇಕು ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಎಂಎಸ್ಸಿ ರಾಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿ ವಿ.ರಘು, ಗಣಿತಶಾಸ್ತ್ರದಲ್ಲಿ ೫ನೇ ರ‍್ಯಾಂಕ್ ಪಡೆದ ಕೆ.ಲೇಖನಾಕೈಲಾಸ್ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ೬೦೮ ಅಂಕ ಪಡೆದ ಬಿ.ದಿವ್ಯತ್ರೀರನ್ನು ಅಭಿನಂದಿಸಲಾಯಿತು.

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್, ನಿವೃತ್ತ ಎಎಸ್‌ಐ ಗೌರಿಪೇಟೆಯ ಕೆ.ಎನ್. ರವೀಂದ್ರನಾಥ, ವಕೀಲ ಗೋವಿಂದರಾಜ್, ನಿವೃತ್ತ ಉಪನ್ಯಾಸಕ ಕೋ.ನಾ ಪರಮೇಶ್ವರ, ಟಿ.ಸುಬ್ಬರಾಮಯ್ಯ, ಬಾಬಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವೇಣುಸುಂದರಗೌಡ, ಕವಿ ಡಾ. ಶರಣಪ್ಪ ಗಬ್ಬೂರು, ಗಾಯಕ ಹರ್ಷಿತ್, ಸುಬ್ಬರಾಮಯ್ಯ ಮುಂತಾದವರು ಉಪಸ್ಥಿತರಿದ್ದರು.