ಜಿಲ್ಲೆ

ಬದುಕು ರೂಪಿಸಿಕೊಳ್ಳುವ ತೀರ್ಮಾನ ನಿಮ್ಮದಾಗಲಿ

Bidar

ಬಸವಕಲ್ಯಾಣ: ಬದುಕು ಹೇಗೆ ರೂಪಿಸಿಕೊಳ್ಳಬೇಕು ಎನ್ನುವ ತೀರ್ಮಾನ ನಿಮ್ಮದಾದಾಗ ಮಾತ್ರ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಹಿಳಾ ವಿವಿ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅಭಿಪ್ರಾಯಪಟ್ಟರು.
ಬಾಂಧವರ ಓಣಿಯಲ್ಲಿ ಗುರುವಾರ ವಿಜಯಪುರನ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ, ಮುಂಡರಗಿ ಶ್ರೀ ಅನ್ನದಾನೇಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠ, ಕಲಬುರಗಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು ಹಾಗೂ ಸ್ನಾತಕೊತ್ತರ ಕೇಂದ್ರ, ಬಸವಕಲ್ಯಾಣದ ಲಿಂಗವಂತ ಹರಳಯ್ಯ ಪೀಠ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೀದರ್ ಜಿಲ್ಲಾ ಘಟಕ ಸಹಯೋಗದಲ್ಲಿ ವಚನಕಾರ್ತಿಯರ ವೈಚಾರಿಕ ನೆಲೆಗಳು ಕುರಿತು ಆಯೋಜಿಸಲಾಗಿರುವ ಎರಡು ದಿವಸಗಳ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಕ್ತಿ-ಶೃದ್ಧೆಯಿಂದ ವಚನಗಳನ್ನು ಹೇಳುತ್ತಾರೆ, ಹಾಡುತ್ತಾರೆ. ವಚನಕಾತರ್ಿಯರ ಆಶಯವನ್ನು ನಡೆಯಲ್ಲಿ ತರುವಾಗ ಆಲಸ್ಯತನವಿದೆ. ಅಕ್ಕನನ್ನು ಸ್ತುತಿಸುತ್ತಾರೆ. ಆದರೆ ತಮ್ಮ ಮಕ್ಕಳು ಮನೆ ಬಿಟ್ಟು ಬಂದರೆ ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಸವರಾಜ ಕಲ್ಗುಡಿ ಮಾತನಾಡಿ, ಅಕ್ಕನ ವಚನಗಳಲ್ಲಿ ಭಾವದ ಮಹಾಪುರವಿಲ್ಲ. ಅರಿವಿನ ಮಹಾಪುರವಿದೆ. ಭಾವದ ನೆಲೆಯನ್ನು ಮೀರಿ ಅನುಭವದ ನೆಲೆಯಲ್ಲಿ ಮಹತ್ವದ ಮಾತುಗಳು ವಚನಕಾತರ್ಿಯರ ವಚನಗಳಲ್ಲಿ ಕಾಣುತ್ತವೆ ಎಂದರು.
ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಂಪಾದಿಸಿದ ಅರಿವಿಂಗೆ ಬೇರೊಂದೊಡಲುಂಟೆ ಕೃತಿ ಬಿಡುಗಡೆ ಮಾಡಿದ ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಮಾತನಾಡಿ, ವಚನ ಚಳುವಳಿಯ ಆಶಯ ಪಾಲನೆಯಾಗಬೇಕಾದ ಅವಶ್ಯಕತೆ ಇದೆ ಎಂದರು.