ಬಾಗಲಕೋಟೆ: ಮನದ ಕಲ್ಮಶಗಳನ್ನು ಹೊಗಲಾಡಿಸಿ ಉತ್ತಮ ಮೌಲ್ಯಗಳನ್ನು ತುಂಬಿ ಶ್ರೇಷ್ಠವ್ಯಕ್ತಿಯನ್ನಾಗಿಸಿ, ಮನುಷ್ಯನ ಬದುಕನ್ನು ಅರಳಿಸುವ ಶಕ್ತಿ ಗುರು ಪರಂಪರೆಗೆ ಇದೆ ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶಿವಾನಂದ ಜಿನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ "ಶಿವಶರಣ ಶ್ರೀ. ಹಡಪದ ಅಪ್ಪಣ್ಣ" ಅವರ ಜಯಂತಿ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೧೨ ಶತಮಾನದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತಸಹಾಯಕರನ್ನಾಗಿ ನೇಮಿಸಿಕೊಂಡು ತಮ್ಮ ಪ್ರತಿ ಕೆಲಸದಲ್ಲಿ ಅವರ ಜೊತೆಗೆ ಇರುವಂತೆ ನೋಡಿಕೊಂಡಿದ್ದರು. ಹಡಪದ ಅಪ್ಪಣ್ಣನವರ ತಮ್ಮ ಕಾಯಕದೊಂದಿಗೆ ಜನರ ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಬಹುದೊಡ್ಡ ಕಾರ್ಯ ಮಾಡಿದ ಬಹು ದೊಡ್ಡ ಶರಣರಾಗಿದ್ದರು. ವ್ಯಾಸ ಮಹರ್ಷಿಯ ಜನ್ಮ ದಿನವನ್ನೆ ಗುರು ಪೂರ್ಣಿಮೆ ಆಚರಿಸುತ್ತ ಬಂದಿದ್ದು, ಭಾರತದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಗುರುವಿನ ಸ್ಮರಣೆಯಿಂದ ಮನದ ಕಲ್ಮಶಗಳು ನಾಶವಾಗುತ್ತೇವೆ. ಇಂದಿನ ಯುವ ಜನಾಂಗಕ್ಕೆ ಗುರುವಿನ ಮಹತ್ವ ಭಾರತೀಯ ಗುರು ಪರಂಪರೆ ತಿಳಿಸುವ ಅಗತ್ಯತೆ ಇದೆ ಎಂದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ೧೨ ನೇ ಶತಮಾನದಲ್ಲಿ ಮಹಾ ಶರಣರಾಗಿದ್ದ ಹಡಪದ ಅಪ್ಪಣ್ಣ ಅವರು ಕಾಯಕ ಹಾಗೂ ದಾಸೋಹದಲ್ಲಿ ತೊಡಗಿಸಿಕೊಂಡAತವರು. ಈ ಕಾಲದಲ್ಲಿ ಶರಣರು ಅನುಭವ ಮಂಟಪದ ಮೂಲಕ ಜಾತಿ ರಹಿತ ಸಮಾಜ ಕಟ್ಟಬೇಕು, ಜಾತ್ಯಾತೀತ ಸಮಾಜ ನಿರ್ಮಾಣವಾಗಬೇಕು, ಮೇಲು ಕೀಳು ಹೋಗಬೇಕು ಎಂಬ ಆಶಯ ಪ್ರಯತ್ನದೊಂದಿಗೆ ಬಹು ದೊಡ್ಡ ಕ್ರಾಂತಿಯಾಯಿತು. ಯಾವುದೆ ಕಾಯಕ ದೊಡ್ಡದ್ದು ಸಣ್ಣದು ಇಲ್ಲ, ಕಾಯಕದಲ್ಲಿ ಕೀಳರಿಮೆ ಬೇಡಾ ನಮ್ಮ ಕಾಯಗಳ ಬಗ್ಗೆ ಗೌರವಿರಬೇಕು. ಕಾಯಕದಲ್ಲಿ ಗೌರವವಿದ್ದಾಗ ಮನುಷ್ಯ ಮನುಷ್ಯನಾಗಿರಲು ಸಾಧ್ಯ, ನಮ್ಮ ಬದುಕಿನಲ್ಲಿ ಜ್ಞಾನ ನೀಡುವ ಗುರುವಿನ ಅವಶ್ಯವಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಲಾಯಿತು. ಮುಖಂಡರಾದ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂಧೆ, ರಾಜು ನಾಯ್ಕರ, ಬಸವರಾಜ ಯಂಕAಚಿ, ಸತ್ಯನಾರಾಯಣ ಹೆಮಾದ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭಾಗೀರಥಿ ಪಾಟೀಲ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನೆವರ, ಉಪಾಧ್ಯಕ್ಷ ಶೋಭಾ ರಾವ, ಯಲ್ಲಪ್ಪ ನಾರಾಯಣಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶ್ರೀಧರ ನಾಗರಬೆಟ್ಟ, ಉಮೇಶ ಹಂಚಿನಾಳ, ಸದಸ್ಯರಾದ ಶಶಿಕಲಾ ಮಜ್ಜಗಿ, ರೇಖಾ ಕಲಬುರಗಿ, ಸ್ಮಜಾತಾ ಶಿಂದೆ, ಸ್ಮೀತಾ ಪವಾರ, ನಾಗಪ್ಪ ಹಡಪದ, ಸಂಗಮೇಶ ಹನಮಸಾಗರ ಸೇರಿದಂತೆ ಇತರರು ಇದ್ದರು.