ಹುಮನಾಬಾದ್‌ನ ಎಸ್‌ಬಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಉದ್ಘಾಟಿಸಿದರು. ಬೀದರ್ ವಿವಿ ಕುಲಪತಿ ಡಾ.ಬಿ.ಎಸ್.ಬಿರಾದಾರ, ಶರಣಬಸವೇಶ್ವರ ವಿವಿ ರಿಜಿಸ್ಟ್ರಾರ್ ಡಾ.ಸಣ್ಣಬಸವಗೌಡ, ಡಾ.ಉಮಾಕಾಂತ ಪಾಟೀಲ್, ಪ್ರಾಂಶುಪಾಲ ರವೀಂದ್ರನಾಥಪ್ಪ ಇತರರಿದ್ದರು. 
ಜಿಲ್ಲೆ

ಬದುಕಿಗೆ ಮಾನವೀಯ ಮೌಲ್ಯ ಅವಶ್ಯಕ

ಹುಮನಾಬಾದ್: ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಬದುಕಿಗೆ ಮಾನವೀಯ ಮೌಲ್ಯಗಳು ಬಹಳ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.

ಪಟ್ಟಣದ ಎಸ್‌ಬಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕುಚಿತ ಮನೋಭಾವದಿಂದ ಶಿಕ್ಷಕರಾದರೂ ಹಿರಿಯರಿಗೆ ಗೌರವ ಕೊಡುವ ದೃಷ್ಟಿಕೋನ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಶಿಕ್ಷಣ ಬದುಕುವ ದಾರಿ ಅಷ್ಟೇ, ಅದೇ ಜೀವನವಲ್ಲ. ಅನೇಕ ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳು ಈ ವಿಚಾರ ಸಂಕಿರಣದಲ್ಲಿ ಅನುಭವ ಹಂಚಿಕೊಳ್ಳಲಿದ್ದು, ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ಬಿರಾದಾರ್, ಶರಣಬಸವೇಶ್ವರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಣ್ಣಬಸವಗೌಡ, ಡಾ.ಉಮಾಕಾಂತ ಎಸ್.ಪಾಟೀಲ್, ಪ್ರಾಂಶುಪಾಲ ರವೀಂದ್ರನಾಥಪ್ಪ, ಪ್ರಮುಖರಾದ ಡಾ ಧನ್ನುಕುಮಾರ ಅಂಗಡಿ, ಡಾ.ಶ್ರೀನಿವಾಸ ಓರಾಡಿ, ದೀಪಕ ಕಲಬುರಗಿ ಇತರರಿದ್ದರು.