ಚಿಕ್ಕಮಗಳೂರಿನ ರಂಗಣ್ಣ ಸಮುದಾಯ ಭವನದಲ್ಲಿ ನಗರ ಹೊಟ್ಟು ಮತ್ತು ಸೌದೆ ವರ್ತಕರ ಸಂಘವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಕೆ.ಎಚ್.ವೆಂಕಟೇಶ್, ಶ್ರೀನಿವಾಸ ರಾವ್, ವೆಂಕಟಸುಬ್ಬರಾವ್, ರಂಜಿತ್ ಮತ್ತಿತರರಿದ್ದರು.  
ಜಿಲ್ಲೆ

ಬದುಕಿ, ಬದುಕಲು ಬಿಡಿ ಎಂಬ ಸೂತ್ರ ಅಳವಡಿಸಿಕೊಳ್ಳಿ

ಚಿಕ್ಕಮಗಳೂರು: ವ್ಯವಹಾರದಲ್ಲಿ ಬದುಕಿ, ಬದುಕಲು ಬಿಡಿ ಎಂಬ ಸೂತ್ರವನ್ನು ಅ ಳವಡಿಸಿಕೊಳ್ಳಬೇಕು. ಸೋಲಿಸಿ ಗೆದ್ದರೆ ಕ್ಷಣಿಕ, ಜೊತೆಯಾಗಿ ಹೆಜ್ಜೆ ಹಾಕಿದರೆ ವ್ಯವಹಾರಿಕ ಸಂಬAಧ ಶಾಶ್ವತವಾಗಿ ಉಳಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ರಂಗಣ್ಣ ಸಮುದಾಯ ಭವನದಲ್ಲಿ ನಗರ ಹೊಟ್ಟು ಮತ್ತು ಸೌದೆ ವರ್ತಕರ ಸಂಘದ ಉದ್ಘಾ ಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ದಿಮೆಯಲ್ಲಿ ವರ್ತಕರು, ಕಾರ್ಖಾನೆ, ಸಾಮಿಲ್ ಮಾಲೀಕರು, ವ್ಯಾಪಾರಿಗಳು ಲಾಭಾಂಶದಲ್ಲಿ ಸರಿ ಸಮಾನವಾಗಿ ಹಂಚಿಕೆ ಮಾಡಿಕೊಳ್ಳುವ ಮೂಲಕ ಬದುಕುವ ಅವಕಾಶ ಮಾಡಿಕೊಡಬೇಕು. ದಿಢೀರನೆ ಬೆಲೆ ಏರಿಕೆ, ಅಸಲಿಗೆ ಮೋಸವಾಗುವ ರೀತಿಯಲ್ಲಿ ವ್ಯವಹರಿಸಬಾರದು ಎಂದು ತಿಳಿಸಿದರು.

ದುಡಿಯವ ವರ್ಗದವರಿಗೆ ಕೇಂದ್ರ ಸರ್ಕಾರವು ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಮೆ ಸೌಲಭ್ಯವಿದ್ದು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಪರಸ್ಪರ ವರ್ತಕರು, ಮಾಲೀಕರು ಸಹಕಾರಿಯಾಗಿ ಬದುಕಿದ್ದಲ್ಲಿ ಸಂಸ್ಥೆಯ ಜೊತೆಗೆ ವರ್ತಕರ ಜೀವನವು ವೃದ್ಧಿಯಾಗಲಿದೆ ಎಂದು ಹೇಳಿದರು.

ಇದೀಗ ಸ್ಥಾಪಿಸಿರುವ ಸಂಘಟನೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವರ್ತಕರ ಮೇಲಿದೆ. ಅಲ್ಲದೇ ಕೌಟುಂಬಿಕ ಮೌಲ್ಯದಡಿ ಕುಟುಂಬದ ರೀತಿಯಲ್ಲಿ ವ್ಯವಹರಿಸಬೇಕು. ನಾಗರೀಕ ಕರ್ತವ್ಯದ ಅರಿವು ಮೂಡಿಸುವ ಜೊತೆಗೆ ಪರಸ್ಪರ ಹೊಂದಾಣಿಕೆಯಿAದ ಬದುಕುವುದನ್ನು ಕಲಿಯಬೇಕು ಎಂದರು.

ಶ್ರೀನಿಧಿ ಇಂಡಸ್ಟಿçÃಸ್‌ನ ಬಿ.ಮಲ್ಲಿಕಾರ್ಜುನ್‌ರಾವ್ ಮಾತನಾಡಿ, ಹಲವಾರು ವರ್ಷಗಳಿಂದ ಹೊಟ್ಟು ಮತ್ತು ಸೌದೆ ಸಾಗಣೆ ತಂಡ ಸಂಘಟಿತರಾಗಿ ಸಮಾಜದ ಮುಂದೆ ಬರುತ್ತಿರುವುದು ಹೆಮ್ಮೆಯ ಸಂಗತಿ. ವ್ಯಾಪಾರದಲ್ಲಿ ಸರಿಸಮಾನವಾಗಿ ನಿರ್ವಹಿಸಲು ಸಂಘಟನೆ ಅತ್ಯಗತ್ಯವಾಗಿದೆ. ಜೊತೆಗೆ ದೈಹಿಕ ಆರೋಗ್ಯದ ಯೋಗಕ್ಷೇಮದ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಸಿ.ಎನ್. ಕಾಫೀ ಟ್ರೇಡಿಂಗ್ ಮಾಲೀಕ ಸಿ.ಎನ್.ಅಕ್ಮಲ್ ಮಾತನಾಡಿ, ಹಿಂದಿನ ಕಾಲದಲ್ಲೇ ಹೊಟ್ಟಿನ ಉದ್ದಿಮೆಯನ್ನು ತಾಲೂಕಿನಲ್ಲಿ ಆರಂಭಿಸಿದ್ದೆವು. ಅಂದು ಸ್ಥಳವಿಲ್ಲದೇ ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಇದೀಗ ಎಲ್ಲದಕ್ಕೂ ಬೆಲೆ ಬಂದಿದೆ. ವ್ಯವಹಾರದಲ್ಲಿ ದ್ರೋಹವಿಲ್ಲದೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಹೊಟ್ಟು ಮತ್ತು ಸೌದೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಚ್.ವೆಂಕಟೇಶ್ ಕಳೆದ ಮೂರು ದಶಕಗಳ ಆರಂಭಗೊAಡ ಉದ್ದಿಮೆ ಸಾವಿರಾರು ಮಂದಿಗೆ ಉದ್ಯೋಗವನ್ನು ಕಲ್ಪಿಸಿದೆ. ಕಾರ್ಮಿಕರ ಶ್ರಮದಿಂದ ಮಾಲೀಕರು ಆದಾಯ ಗಳಿಸಲು ಸಾಧ್ಯವಾಗಿದ್ದು, ಲಾಭ ಅಥವಾ ನಷ್ಟಗೊಂಡಲ್ಲಿ ಸರಿಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್‌ರಾವ್, ಸಾಮಿಲ್ ಮಾಲೀಕರಾದ ವೆಂಕಟಸುಬ್ಬರಾವ್, ರಂಜಿತ್, ಕುಮಾರ್, ಪ್ರೇಮ್, ವರ್ತಕರ ಸಂಘದ ಗೌರವಾಧ್ಯಕ್ಷ ಪಿಚಂಡಿ, ಉಪಾಧ್ಯಕ್ಷರಾದ ಜಾಕೀರ್ ಹುಸೇನ್, ಮಹಮ್ಮದ್ ರಜಾಕ್, ಪ್ರಧಾನ ಕಾರ್ಯದರ್ಶಿ ಗಣೇಶ್ ಆಚಾರ್ಯ, ಖಜಾಂಚಿ ಯೂಸುಫ್ ಕಾಕಾ, ಸಹ ಕಾರ್ಯದರ್ಶಿ ಜಹೀರ್ ಅಹ್ಮದ್, ನಿರ್ದೇಶಕರಾದ ಮೋಹನ್ ಕುಮಾರ್, ಅಶೋಕ್, ಜಂಶೀಧ್‌ಖಾನ್ ಮತ್ತಿತರರಿದ್ದರು.