ಜಿಲ್ಲೆ

ಬದುಕಲು ಲಾಕ್​ಡೌನ್ ಅನಿವಾರ್ಯ

ಮುಂಡಗೋಡ: ವಿಶ್ವದಿಂದ ಕೋವಿಡ್-19 ಓಡಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಲಾಕ್​ಡೌನ್ ಘೊಷಣೆ ಮಾಡದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ಲಾಕ್​ಡೌನ್​ನಿಂದ ಹಾನಿಯಾಗಿದೆ. ಆದರೆ, ಅದು ನಾವು ಬದುಕಲು ಸಲುವಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಬನ್ನಿಕಟ್ಟಿ ಬಳಿ ಬಿಪಿಎಲ್ ಪಡಿತರ ಚೀಟಿದಾರರಿಗೆ ವೈಯಕ್ತಿಕವಾಗಿ ರೇಷನ್ ಕಿಟ್​ಗಳನ್ನು ಶನಿವಾರ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.

ನಾವೆಲ್ಲರೂ ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂದರೆ ಮಾತ್ರ ಕರೊನಾ ವೈರಸ್ ತಡೆಗಟ್ಟಲು ಸಾಧ್ಯ. ಯಾವ ಜಾತಿ, ಮತ, ಧರ್ಮ ನೋಡದೆ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗ ವೈಯಕ್ತಿಕವಾಗಿ ರೇಷನ್ ಕಿಟ್​ಗಳನ್ನು ವಿತರಿಸುತ್ತಿದ್ದೇನೆ ಎಂದರು.

ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿದರು. ಪಟ್ಟಣದ ಲಮಾಣಿ ತಾಂಡಾ, ಹಳೂರ ಓಣಿ, ನೆಹರು ನಗರ, ಗಾಂಧಿ ನಗರ, ಕಂಬಾರಗಟ್ಟಿ, ಬಸವೇಶ್ವರ ನಗರ ಬಡಾವಣೆಗಳಲ್ಲಿ ಸಾಂಕೇತಿಕವಾಗಿ ರೇಷನ್ ಕಿಟ್​ಗಳನ್ನು ವಿತರಿಸಿದರು. ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ವಿವೇಕ ಹೆಬ್ಬಾರ, ಅಶೋಕ ಚಲವಾದಿ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಜಯಸುಧಾ ಭೋವಿ ಇತರರಿದ್ದರು.