ಜಿಲ್ಲೆ

ಬದುಕನ್ನೇ ನಾಶ ಮಾಡುವ ದುಶ್ಚಟಗಳು : ಎಂಎಲ್‌ಸಿ ಸಿ.ಎಂ. ಲಿಂಗಪ್ಪ ಅಭಿಮತ

ಬಿಡದಿ: ಮದ್ಯಪಾನ, ಧೂಮಪಾನದಂತಹ ದುಶ್ಚಟಗಳು ಸವಾಜದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಕುಟುಂಬದ ಮಾನಸಿಕ ನೆಮ್ಮದಿಯನ್ನೂ ಹಾಳುಮಾಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅಭಿಪ್ರಾಯಪಟ್ಟರು.

ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ 1507ನೇ ಮಧ್ಯವರ್ಜ್ಯನ ಶಿಬಿರದ ಸವಾರೋಪ ಸವಾರಂಭದಲ್ಲಿ ವಾತನಾಡಿದ ಅವರು, ಸಾವಾಜಿಕ ಕಳಕಳಿ ಹೊಂದಿರುವ ಸಂ, ಸಂಸ್ಥೆಗಳೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕಿದೆ. ಮೋಜು, ಮಸ್ತಿಗಾಗಿ ಆರಂಭಿಸುವ ತಾತ್ಕಾಲಿಕ ದುಶ್ಚಟಗಳು ಮನುಷ್ಯನ ಬದುಕನ್ನು ನಾಶಗೊಳಿಸುತ್ತವೆ. ಮಧ್ಯಪಾನ, ಜೂಜುನಂತಹ ದುಶ್ಚಟಗಳಿಗೆ ದಾಸರಾದವರು ತನ್ನತನವನ್ನೇ ಕಳೆದುಕೊಂಡು ವ್ಯಕ್ತಿತ್ವಕ್ಕೆ ಚ್ಯುತಿ ತಂದುಕೊಳ್ಳುತ್ತಾರೆ. ಅಲ್ಲದೆ ದುಶ್ಚಟಗಳು ದೊಡ್ಡ ಪಿಡುಗಾಗಿದ್ದು ಸವಾಜದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತವೆ. ಇಂತಹ ಸಮಯದಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂಸ್ಥೆ ಸವಾಜಮುಖಿಯಾಗಿ ಕೆಲಸ ವಾಡುತ್ತಿದ್ದು, ದುಶ್ಚಟಗಳಿಗೆ ದಾಸರಾಗಿರುವವರನ್ನು ಸವಾಜದ ಮುಖ್ಯವಾಹಿನಿಗೆ ಕರೆತರಲು ಅನೇಕ ಪ್ರಯೋಗ ಮತ್ತು ಶಿಬಿರಗಳ ಮೂಲಕ ಅರಿವು ಮೂಡಿಸಿ ಅವರ ಮನಪರಿವರ್ತನೆ ವಾಡುವ ಕೆಲಸ ವಾಡುತ್ತಿರುವುದು ಸಂತಸದ ವಿಷಯ ಎಂದರು.

ಗ್ರಾವಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪಿ. ಶ್ರೀನಿವಾಸ್ ವಾತನಾಡಿ, ಸಂಸ್ಥೆ ಸ್ವಾಸ್ಥ್ಯ ಸವಾಜ ನಿರ್ಮಿಸಲು ಶ್ರಮಿಸುತ್ತಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಮಧ್ಯವರ್ಜ್ಯನ ಶಿಬಿರಗಳ ಮೂಲಕ ದುಶ್ಚಟಗಳಿಗೆ ದಾಸರಾಗಿರುವವರಿಗೆ ತಿಳಿವಳಿಕೆ ನೀಡಿ ಸವಾಜದ ಮುಖ್ಯವಾಹಿನಿಗೆ ತರುವ ಕೆಲಸ ವಾಡುತ್ತಿದೆ. ಇಂತಹ ಶಿಬಿರಗಳಿಂದ ಈಗಾಗಲೇ ರಾಜ್ಯದ ಸಾವಿರಾರು ಜನರು ದುಶ್ಚಟಗಳಿಂದ ಮುಕ್ತರಾಗಿ ಸುಖ ಜೀವನ ನಡೆಸುತ್ತಿದ್ದಾರೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ, ತಾಪಂ ವಾಜಿ ಅಧ್ಯಕ್ಷ ಗಾಣಕಲ್‌ನಟರಾಜ್ ವಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಚಿಕ್ಕಣ್ಣಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ್, ಯೂನಿಯನ್ ಬ್ಯಾಂಕ್ ನಿವೃತ್ತ ವ್ಯಾನೇಜರ್ ಚಿಕ್ಕಹೊನ್ನಯ್ಯ, ಜವಳಿ ವ್ಯಾಪಾರಿ ಸಂದ ಅಧ್ಯಕ್ಷ ಶಿವಪ್ರಸಾದ್, ಡಾ. ಸಮರ್ಥ, ಮೈಸೂರು ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಭಾಸ್ಕರ್, ತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ್, ಬಿಡದಿ ವಲಯ ಮೇಲ್ವಿಚಾರಕ ದೀಪಕ್, ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ರಂಜಿತಾ ಮತ್ತಿತರಿದ್ದರು.