ಹಾಸನ: ನಮ್ಮ ಬದುಕನ್ನು ಸದಕಾಲ ಹಸನಾಗಿ ಇಟ್ಟುಕೊಳ್ಳಬೇಕಾದರೆ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಆಗ ಮಾತ್ರ ಸತ್ತ ಮೇಲು ಸಮಾಜ ನಮ್ಮನ್ನು ಗುರುತಿಸುತ್ತದೆ ಅದರಂತೆಯೇ ಡಾ. ಗುರುರಾಜ್ ಹೆಬ್ಬಾರ್ ಅವರ ಕಾರ್ಯಗಳು ಸಮಾಜ ಸೇವೆ ಸಾಕ್ಷಿಯಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ‌್ಯನಿರ್ವಹಣಾಧಿಕಾರಿ ಕಾಂತರಾಜು ತಿಳಿಸಿದರು.
ನಗರದ ವೈದ್ಯಕೀಯ ಕಾಲೇಜು ಕಟ್ಟಡದ 5ನೇ ಮಹಡಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಹಿಮ್ಸ್, ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್, ಜನಕ ಕಲ್ಯಾಣ ಚಾರಿಟಬಲ್ ಟ್ರಸ್ಟ್, ಸಜೀವಿನಿ ಸಹಕಾರಿ ಆಸ್ಪತ್ರೆ, ಕಾಮದೇನು ಸಹಕಾರಿ ವೃದ್ಧಾಶ್ರಮ, ರೈತಬಂದು ಟ್ರಸ್ಟ್, ರೋಟರಿ ಕ್ಲಬ್, ಹಾಸನ ಹೊಯ್ಸಳ, ಕಟ್ಟಾಯ ಹೋಬಳಿ ಗ್ರಾಮಸ್ಥರು ಇತರರ ಆಶ್ರಯದಲ್ಲಿ ಭಾನುವಾರ ಡಾ. ಗುರುರಾಜು ಹೆಬ್ಬಾರ್‌ರವರ ಸ್ಮರಣಾರ್ಥ ರಕ್ತದಾನ ಶಿಬಿರ, ದೇಹದಾನ-ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಉದ್ಘಾಟಿಸಿ ಮಾತನಾಡಿದ ಅವರು, ಗುರುರಾಜು ಹೆಬ್ಬಾರ್ ಅವರು ತಮ್ಮ ಜೀವಿತ ಅವಧಿಯಲ್ಲಿ ಮಾಡಿದಂತಹ ಸಾಧನೆ ಮತ್ತು ಅವರ ಕೊಡುಗೆಗೆ ಇಷ್ಟೊಂದು ಜನರು ಸೇರಿರುವುದು ಒಂದು ಮೈಲಿಗಲ್ಲಾಗಿದೆ. ಎಲ್ಲಾ ಹುದ್ದೆಗಳಲ್ಲಿ ವೈದ್ಯ ಹುದ್ದೆ ಎಂಬುದು ಒಂದು ಶ್ರೇಷ್ಟ ಹುದ್ದೆಯಾಗಿದ್ದು, ಇತಿಹಾಸ ಪುಟ ತೆರೆದು ನೋಡಿದರೆ ವೈದ್ಯರು ಸಾಧನೆ ಅಪಾರ ಎಂದರು.
ಚರ್ಮರೋಗ ತಜ್ಞ ಡಾ. ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪರ ಕಾಳಜಿ ಜೊತೆಗೆ ಜ್ಞಾನ ಕೂಡ ಸುಭದ್ರವಾಗಿರಬೇಕು ಈ ನಿಟ್ಟಿನಲ್ಲಿ ಡಾ. ಗುರುರಾಜು ಹೆಬ್ಬಾರ್ ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಒಬ್ಬ ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಸೇವೆ ಮಾಡುವ ಮೂಲಕ ಜೀವನವನ್ನು ಸಾರ್ಥಕತೆ ಪಡೆಸಿಕೊಳ್ಳಬೇಕೆಂದು ಸಲಹೆ ನೀಡಿದರು.ಸಂಜೆ 4 ಗಂಟೆಯಲ್ಲಿ ತಾಲೂಕಿನ ಕಟ್ಟಾಯ ಗ್ರಾಮದಲ್ಲಿರುವ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ಮುಂಭಾಗ ಡಾ. ಗುರುರಾಜು ಹೆಬ್ಬಾರ್ ರವರ ಪ್ರತಿಮೆ ಅನಾವರಣವನ್ನು ನೆರವೇರಿಸಲಾಯಿತು. ಇದೆ ವೇಳೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ವೈದ್ಯರಾದ ಶಿರೂರು ಶಾಂತರಾಮಶೆಟ್ಟಿ ಮತ್ತು ಸಮಾಜ ಸೇವಕ ನೂರ್ ಅಹಮದ್ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ. ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಹಿರಿಯ ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ, ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ್, ಸಮಾಜ ಸೇವಕ ಮುತ್ತತ್ತಿ ರಾಜಣ್ಣ, ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷ ಮಾಧವ್ ಶೆಣ್ಯೆ, ಸಮಾಜ ಸೇವಕಿ ಜಯಲಕ್ಷ್ಮಿ ರಾಜಣ್ಣಗೌಡ, ಮಹಾಲಕ್ಷ್ಮಿ, ರೋಟರಿ ಕ್ಲಬ್ ಅಫ್ ಹಾಸನ್ ಹೊಯ್ಸಳ ಅಧ್ಯಕ್ಷರಾದ ರಘುನಂದನ್, ಸಮಾಜಸೇವಕ ರಾಜು ಗೊರೂರು, ಗೋಪಾಲಕೃಷ ಪ್ರಭು, ಇಮ್ಸ್ ಪ್ರಾಂಶುಪಾಲ ಡಾ. ಕೆ.ಆರ್. ನಾಗೇಶ್, ಮಾಜಿ ಶಾಸಕ ಬಿ.ವಿ. ಕರೀಗೌಡ, ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕಿ ಕೆ.ಟಿ. ಜಯಶ್ರೀ, ಡಿ.ಜಿ. ಕೃಷ್ಣೇಗೌಡ, ಸಮಾಜಸೇವಕ ಅಮ್ಜಾದ್ ಖಾನ್, ಲಿಂಗಾಯುತ ವೀರಶೈವ ಸಮಾಜದ ಅಧ್ಯಕ್ಷ ಬಿ.ಟಿ. ಐಸಾಮೆಗೌಡ, ಬಿ.ಎಸ್. ಪ್ರಕಾಶ್ ಇತರರು ಇದ್ದರು.