ಭಾರಿ ವಾಹನಗಳ ಚಾಲಕರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಮಾರ್ಗಸೂಚಿ ಲಕ ಅಳವಡಿಸಿರುವುದು. 
ಜಿಲ್ಲೆ

ಬದಲಿ ಮಾರ್ಗಸೂಚಿ ಲಕ ಅಳವಡಿಕೆ

ಶಿವಮೊಗ್ಗ: ಹುಲಿಕಲ್ ಘಾಟ್ ರಸ್ತೆಯಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ಭಾರಿ ವಾಹನಗಳ ಸಂಚಾರ ನಿಷೇಸಲಾಗಿದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಸಹ ಸೂಚಿಸಲಾಗಿದೆ. ಆದರೆ ಮಾರ್ಗದಲ್ಲಿ ಎಲ್ಲಿಯೂ ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ಲಕ ಅಳವಡಿಸಿರಲಿಲ್ಲ. ಇದರಿಂದ ಭಾರಿ ವಾಹನಗಳ ಚಾಲಕರು ಮಾಸ್ತಿಕಟ್ಟೆವರೆಗೆ ಆಗಮಿಸಿ ವಾಪಸ್ ಹೋಗುವಂತಾಗಿತ್ತು. ಈ ಬಗ್ಗೆ ವಿಜಯವಾಣಿಯಲ್ಲಿ ಆ.11ರ ಸಂಚಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿರುವ ಪಿಡಬ್ಲುಡಿ ಅಕಾರಿಗಳು ಸೋಮವಾರ ಬೆಳಗ್ಗೆ ಪ್ರಮುಖ ಸ್ಥಳಗಳಲ್ಲಿ ಪರ್ಯಾಯ ಮಾರ್ಗಸೂಚಿ ಬ್ಯಾನರ್ ಅಳವಡಿಸಿದ್ದಾರೆ. ಆಯನೂರು ಸರ್ಕಲ್, ಕೈಮರ ಸರ್ಕಲ್, ನಗರ ಚಿಕ್ಕಪೇಟೆ ಸರ್ಕಲ್, ಬಟ್ಟೆಮಲ್ಲಪ್ಪ ಸರ್ಕಲ್, ಸಾಗರದಲ್ಲಿ ಕೂಡ ಮಾರ್ಗಸೂಚಿ ಬ್ಯಾನರ್ ಅಳವಡಿಸಲಾಗಿದೆ.