ಸೋಮವಾರಪೇಟೆ: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ಕಂಪಾನಿಯೋ ಅವರ ಸಹಯೋಗದಲ್ಲಿ ವಾಹನ ಚಾಲಕರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಫುಟ್ ಪಲ್ಸ್ ಥೆರಪಿ ಉಚಿತ ಚಿಕಿತ್ಸಾ ಶಿಬಿರ ಬುಧವಾರ ನಡೆಯಿತು.
ಶಾಸಕ ಡಾ.ಮಂತರ್‌ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಜೀವನಶೈಲಿ ಬದಲಾಗುತ್ತಿರುವುದರಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಉತ್ತಮ ಆಹಾರ, ವ್ಯಾಯಾಮದಿಂದ ಹಿಂದೆ ಸರಿಯುತ್ತಿದ್ದು, ಸಿದ್ಧ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯ ಹದಗೆಡುತ್ತಿದೆ. ದಿನಂಪ್ರತಿ ಸ್ವಲ್ಪ ಸಮಯವನ್ನಾದರೂ ವ್ಯಾಯಾಮಕ್ಕೆ ಅವಕಾಶ ಮಾಡಿಕೊಳ್ಳಬೇಕು. ವರ್ಷಕ್ಕೊಮ್ಮೆ ಪೂರ್ಣ ಪ್ರಮಾಣದಲ್ಲಿ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಫುಟ್ ಥೆರಪಿ ರಕ್ತ ಸಂಚಾರಕ್ಕೆ ಫುಟ್ ಥೆರಪಿಯಿಂದ ಹೆಚ್ಚಿನ ಅನುಕೂಲವಾಗುವುದು. ವಾಹನ ಸವಾರರು ಶ್ರಮವಹಿಸಿ ಕೆಲಸ ಮಾಡುವುದರಿಂದ ಈ ಥೆರಪಿಯಿಂದ ಹೆಚ್ಚಿನ ಅನುಕೂಲವಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್‌ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಗೌರವಾಧ್ಯಕ್ಷ ಕೆ.ಜಿ.ಸುರೇಶ್, ಸಂಸ್ಥೆಯ ವ್ಯವಸ್ಥಾಪಕ ಶಶಿಕಾಂತ್ ಪೂಜಾರಿ ಇದ್ದರು.