ಜಿಲ್ಲೆ

ಬದಲಾದ ಕಾನೂನು ಅರಿಯಿರಿ

ರಮೇಶ ಮೇಳಕುಂದಾ

ಕಲಬುರಗಿ: ಬದಲಾವಣೆ ಜಗದ ನಿಯಮ. ಬದಲಾದ ಕಾನೂನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಮುಂದೆ ಸಾಗಿದರೆ ಅನುಕೂಲವಾಗಲಿದೆ ಎಂದು ಜಿಲ್ಲಾ ಗ್ರಾಹಕ ವೇದಿಕೆ ಆಯೋಗದ ಅಧ್ಯಕ್ಷೆ ಮಾಲತಿ ರಶ್ಮಿ ಹೇಳಿದರು.
ಕೇಂದ್ರ ಸಂವಹನ ಇಲಾಖೆ ಹಾಗೂ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ಆಶ್ರಯದಲ್ಲಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕೀರ್ಣದಲ್ಲಿ ಮಾತನಾಡಿ, ಕೌಶಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕಿದೆ. ನೆಲದ ಕಾನೂನು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ. ವಕೀಲರು ನೂತನ ಕಾಯ್ದೆ ಅರಿತು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಸAಪನ್ಮೂಲ ವ್ಯಕ್ತಿ, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಇನ್ಸ್ಪೆಕ್ಟರ್ ಮಹಾದೇವಪ್ಪ ದಿಡ್ಡಿನಮನಿ ಮಾತನಾಡಿ, ಹಳೇ ಕಾನೂನಿನಲ್ಲಿ ೨೩ ಅಧ್ಯಾಯಗಳಿದ್ದು, ೫೧೧ ಕಲಂ ಇದ್ದವು. ಹೊಸ ಕಾನೂನಿನಲ್ಲಿ ೨೦ ಅಧ್ಯಾಯ ಹಾಗೂ ೩೫೮ ಕಲಂಗಳಿವೆ. ೨೦ ಕಲಂ ಹೊಸದಾಗಿ ಸೇರ್ಪಡೆಯಾಗಿದ್ದರೆ ಅನಗತ್ಯ ೧೯ ಕಲಂ ತೆಗೆದು ಹಾಕಲಾಗಿದೆ ಎಂದು ಹೇಳಿದರು.
ನ್ಯಾಯವಾದಿ ಗಿರೀಶ ದೇಶಪಾಂಡೆ ಮಾತನಾಡಿ, ನೂತನ ಕಾನೂನುಗಳ ಮುಖ್ಯ ಉz್ದೆÃಶ ನೊಂದ ವ್ಯಕ್ತಿಗೆ ಸಾಂತ್ವಾನ ಅಥವಾ ನ್ಯಾಯ ಕೊಡಿಸುವುದಾಗಿದೆ ಎಂದರು.
ಪ್ರಾAಶುಪಾಲ ಡಾ.ಎಸ್.ಚಂದ್ರಶೇಖರ ಮಾತನಾಡಿ, ಕಾನೂನು ಹರಿಯುವ ನದಿ ಇದ್ದಂತೆ. ಸಮಾಜ ಬದಲಾದಂತೆ ಕಾನೂನು ಬದಲಾಗಬೇಕು. ಬದಲಾವಣೆ ಎಲ್ಲರೂ ಅರಿಯಬೇಕು ಎಂದರು.
ಕಾಲೇಜಿನಲ್ಲಿ ಆಯೋಜಿಸಿದ ಭಾಷಣ ಸ್ಪರ್ಧೇಯಲ್ಲಿ ವಿಜೇತ ೧೦ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಐಕ್ಯೂಎಸಿ ಸಂಯೋಜಕಿ ಅಪರ್ಣಾ ಶಿಂಧೆ, ಎನ್‌ಎಸ್‌ಎಸ್ ಸಂಯೋಜಕ ತಿಪ್ಪೆಸ್ವಾಮಿ ಎಸ್., ನಾಗಪ್ಪ ಅಂಬಾಗೋಳ ಇತರರಿದ್ದರು. ವಿದ್ಯಾರ್ಥಿನಿ ಪೂಜಾ ರಾಘವೇಂದ್ರ ಸ್ವಾಗತಿಸಿದರು. ಸುನೀಲ ನಿರೂಪಣೆ ಮಾಡಿದರು.