ಜಿಲ್ಲೆ

ಬಣ್ಣದ ಆಟವಾಡಿದ್ದ ಯುವಕರು ನೀರು ಪಾಲು

ಬಣ್ಣದ ಆಟವಾಡಿದ್ದ ಯುವಕರು ನೀರು ಪಾಲು
ಚಿಕ್ಕೋಡಿ:
ರಂಗ ಪಂಚಮಿ  ಹಿನ್ನಲೆ ಬಣ್ಣದಾಟವಾಡಿ ಬಾವಿಗೆ ಸ್ನಾನಕ್ಕೆ ಹೋಗಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾದ ಘಟನೆ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಯಕ್ಸಂಬಾ ಗ್ರಾಮದ ನಿವಾಸಿಗಳಾದ ವೇದಾಂತ ಹಿರೇಕೋಡಿ (11), ಮನೋಜ ಕಲ್ಯಾಣಿ (09) ಮೃತ ದುರ್ದೈವಿಗಳು.ರಂಗ ಪಂಚಮಿ ನಿಮಿತ್ತ ಬಣ್ಣ ಆಡಿದ್ದ ಬಾಲಕರು ಬಾವಿಯ ನೀರಿನಲ್ಲಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಸದಲಗಾ ಠಾಣೆ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ‌ನಡೆಸಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.