ಜಿಲ್ಲೆ

ಬಡವರಿಗೆ ಫುಡ್ ಕಿಟ್ ವಿತರಣೆ

ವಿಜಯಪುರ: ಕರೋನಾ ಮಹಾಮಾರಿಯ ಹಿನ್ನೆಲೆ ಅರ್ಥಿಕ ಸಂಕಷ್ಟದಲ್ಲಿ ಸಿಲುಕಿ ಪರದಾಡುತ್ತಿರುವ ಹಾಗೂ ದೀಪಾವಳಿ ಆಚರಿಸಲು ಹಣವಿಲ್ಲದೆ ಗೋಳಾಡುತ್ತಿರುವ ಬಡ ಕುಟುಂಬಗಳಿಗೆ ಇಂದು ಫುಡ್ ಕಿಟ್ ವಿತರಣೆ ಮಾಡಲಾಯಿತು. ಮೆಟ್ರೊಕಾಸ್ಟ್ ನೆಟ್ವರ್ಕ್(BRDS) ಕೇಬಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ವತಿಯಿಂದ ಬಡವರಿಗೆ ಅಹಾರ ಪೊಟ್ಟಣದ ಪ್ಯಾಕೇಟ್ ಗಳನ್ನು ವಿತರಿಸಲಾಯಿತು. ವಿಜಯಪುರ ಬಿ ಆರ್ ಡಿ ಎಸ್ ಕೇಬಲ್ ಸದಸ್ಯರಾದ ಮಹೇಶ ಹಾಗೂ ಸಾಜೀದ್ ಖಾನ್ ಸೇರಿ ನಗರದಲ್ಲಿನ 1200 ಬಡ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು. ಮೊದಲೇ ಸಿದ್ದಪಡಿಸಿದ ಕಿಟ್ ನಲ್ಲಿ ಎಣ್ಣೆ, ಗೋಧಿ ಹಿಟ್ಟು, ಅಕ್ಕಿ, ಸಾಬೂನು, ಉಪ್ಪು, ಖಾರ, ಚಹಾಪುಡಿ, ಸಕ್ಕರೆ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಲಾಯಿತು. ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಕೇಬಲ್ ಕಚೇರಿಯಲ್ಲಿ ಕಿಟ್ ವಿತರಿಸಿ ಬಡ ಜನ್ರಿಗೆ ಸಹಾಯ ಮಾಡಲಾಯಿತು.