ಜಿಲ್ಲೆ

ಬಡವರಿಗೆ ನೆರವಾಗಿರುವುದು ಖುಷಿ ತಂದಿದೆ

Kalaburagi

ಆಳಂದ: ಕರೊನಾದಿಂದಾಗಿ ಸಾಕಷ್ಟು ಜನರು ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಸಕರ ಅಭಿಮಾನಿಗಳು ಅದ್ದೂರಿ ಆಚರಣೆ ನಡೆಸದೆ, ಬಡವರಿಗೆ ನೆರವಾಗುತ್ತಿರುವುದು ಖುಷಿ ತಂದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಡಸಾವಳಿ ಗ್ರಾಮದಲ್ಲಿ ಶಾಸಕ ಸುಭಾಷ ಆರ್. ಗುತ್ತೇದಾರ್ ಅವರ ಜನ್ಮದಿನದ ನಿಮಿತ್ತ ಹರ್ಷಾನಂದ ಎಸ್. ಗುತ್ತೇದಾರ್ ಅಭಿಮಾನಿಗಳ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಡವರು, ನಿರ್ಗತಿಕರಿಗೆ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.
ಇದು ಅತ್ಯಂತ ಕ್ಲಿಷ್ಟಕರ ಸಮಯವಾಗಿದ್ದು, ಒಬ್ಬರು ಇನ್ನೊಬ್ಬರ ನೆರವಿಗೆ ಬರಬೇಕಿದೆ. ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದರ ಜತೆಗೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ಸುಮಾರು 200 ಜನರಿಗೆ ಕಿಟ್ ವಿತರಿಸಲಾಯಿತು. ಅಭಿಮಾನಿ ಬಳಗದ ಮಹೇಶ ಮುನ್ನಳ್ಳಿ, ಮುಬಾರಕ್ ಮೂಲಗೆ, ಧರೆಪ್ಪ ಕುಂಬಾರ, ದಸ್ತಗೀರ್ ಗುಂಜೂಟೆ, ಹಣಮಂತ ಜಮಾದಾರ, ಸಿದ್ದಾರಾಮ ಘಾಳೆ, ಅನೀಲ ಅರ್ಜುನ ಜಮಾದಾರ, ಮಲ್ಲಿಕಾರ್ಜುನ ಜಮಾದಾರ, ಶ್ರೀಕಾಂತ ಸಗರ, ಪ್ರಭಾಕರ ಘನಾತೆ, ಸಾತಪ್ಪ ಮೈಂದರ್ಗಿ, ತುಕಾರಾಮ ಘಾಳೆ, ಪರಮೇಶ್ವರ ಪಾಟೀಲ್, ವಿಜಯ ಮಾನೆ, ಭೀಮಾಶಂಕರ ಘೋಡಕೆ, ಭಗವಾನ ಹತ್ತಗಾಳೆ, ರವಿ ಶೇರಿಕಾರ ಇದ್ದರು.

ಕರೊನಾ ಸೇನಾನಿಗಳಿಗೆ ಮಾಸ್ಕ್ ಹಂಚಿಕೆ
ಆಳಂದನ ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಶಾಸಕ ಸುಭಾಷ್ ಗುತ್ತೇದಾರ್ ಅವರ 69ನೇ ಜನ್ಮದಿನದ ನಿಮಿತ್ತ ಭಾರತೀಯ ಜನತಾ ಪಕ್ಷದ ಮುಖಂಡರು ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಜಿಪಂ ಸದಸ್ಯ ಹರ್ಷಾನಂದ ಎಸ್. ಗುತ್ತೇದಾರ್, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ್, ಪ್ರಮುಖರಾದ ಮಲ್ಲಿಕಾರ್ಜುನ ಕಂದಗೂಳೆ, ಹಣಮಂತರಾವ ಮಲಾಜಿ, ಶರಣು ಕುಮಸಿ, ಪ್ರಕಾಶ ಮಾನೆ ಇದ್ದರು.