ಹರಿಹರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಕೊಳಚೆ ಪ್ರದೇಶದಲ್ಲಿ ಬುಧವಾರ ದಿನಸಿ ಕಿಟ್‌ಗಳನ್ನು ಬಡವರಿಗೆ ವಿತರಿಸಲಾಯಿತು. ಶಾಸಕ ಎಸ್.ರಾಮಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಡಿವೈಎಸ್‌ಪಿ ಮಂಜುನಾಥ್ ಗಂಗಲ್, ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಇತರರಿದ್ದರು. 
ಜಿಲ್ಲೆ

ಬಡವರಿಗೆ ಕೈಲಾದ ಸಹಾಯ ಮಾಡಿ

ಹರಿಹರ: ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೇ ಕುಟುಂಬ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಜನಪ್ರತಿನಿಧಿಗಳು ಕೈಲಾದ ಸಹಾಯ ಮಾಡುವ ಮೂಲಕ ಆತ್ಮಸ್ತೈರ್ಯ ತುಂಬಬೇಕೆಂದು ಶಾಸಕ ಎಸ್.ರಾಮಪ್ಪ ಹೇಳಿದರು.

ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಕೊಳೆಚೆ ಪ್ರದೇಶದ ನಿವಾಸಿಗಳಿಗೆ ಬುಧವಾರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಬಡವರಿಗಾಗಿ 15 ರಿಂದ 20 ಸಾವಿರ ದಿನಸಿ ಕಿಟ್‌ಗಳನ್ನು ಸಿದ್ಧಪಡಿಸಿದ್ದು, ಮನೆ-ಮನೆಗೆ ತೆರಳಿ ವಿತರಿಸಲಾಗುವುದು. ಸರ್ಕಾರ ನೀಡುತ್ತಿರುವ ಪಡಿತರ ಹೊರತು ಜೋಳ, ಖಾರದ ಪುಡಿ, ಎಣ್ಣೆ, ಬೇಳೆ, ಉಪ್ಪು, ಸಕ್ಕರೆ ಮತ್ತಿತರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ದಾವಣಗೆರೆ ಆಸ್ಪತ್ರೆಯಲ್ಲಿ ಪತ್ನಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದರೂ, ಶಾಸಕ ಎಸ್.ರಾಮಪ್ಪ ಇಲ್ಲಿ ಬಡವರ ನೋವಿಗೆ ಸ್ಪಂದಿಸುತ್ತಿದ್ದಾರೆ. ಇತರೆ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದರು.

ಡಿವೈಎಸ್‌ಪಿ ಮಂಜುನಾಥ್ ಗಂಗಲ್, ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮೀ, ಸಿಪಿಐ ಶಿವಪ್ರಸಾದ್, ಪಿಎಸೈಗಳಾದ ಶೈಲಶ್ರೀ, ಭಾರತಿ ಕಂಕಣವಾಡಿ, ಹಿರಿಯ ಆರೋಗ್ಯ ಸಹಾಯಕ ಎಂ.ವಿ.ಹೊರಕೆರೆ, ನಗರಸಭೆ ಸದಸ್ಯರಾದ ಎಸ್.ಎಂ.ವಸಂತ, ಶಂಕರ್ ಕಟಾವಕರ್, ನಾಗರತ್ನ, ಮುಜಾಮಿಲ್ ಇತರರಿದ್ದರು.