ಕಲಬುರಗಿ: ಕರೊನಾ ಮಟ್ಟ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಲಾಕ್ಡೌನ್ ಅವಧಿ ವಿಸ್ತರಿಸಿದ್ದು ಇದರಿಂದ ನಿತ್ಯ ದುಡಿಯುವವರು ಒಂದೊತ್ತಿನ ಊಟಕ್ಕಾಗಿ ಪರದಾಡುವಂತಾಗಿತ್ತು. ಇದನ್ನು ಮನಗಂಡ ನಾಲ್ಕು ಚಕ್ರ ತಂಡ (ಎ ವ್ಹೀಲ್ ಫಾರ್ ಲೈಫ್) ನಿರ್ಗತಿಕರು, ಮತ್ತು ಬಡವರಿಗೆ ಅಗತ್ಯ ದೀನಸಿ ವಸ್ತುಗಳನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದೆ.
ಈಗಾಗಲೇ ಜಿ-99, ಜಿ-55 ತಂಡಗಳು ಈ ಕಾರ್ಯದಲ್ಲಿ ತೊಡಗಿದ್ದು ನಾಲ್ಕು ಚಕ್ರ ತಂಡದ ಸೇವೆಯೂ ಬಡವರ ಕಲ್ಯಾಣಕ್ಕಾಗಿದೆ.
ತಂಡದಲ್ಲಿರುವವರು ಮಧ್ಯಮ ವರ್ಗದವರು. ತಮ್ಮ ಸ್ವಂತ ಹಣದಲ್ಲಿಯೇ ಜನರಿಗೆ ನೆರವಾಗಲು ಮುಂದಾಗಿದ್ದಾರೆ. ಮೊದಲು ಬಡವರಾಗಿರುವ ಅರ್ಹರನ್ನು ಗುರುತಿಸಿ ಅವರಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡುತ್ತಿದ್ದಾರೆ.
ಕಲ್ಯಾಣರಾವ್ ಪಾಟೀಲ್ ಕಡಣಿ, ಮಾಲಾ ಎಸ್.ಐ. ದನ್ನೂರ, ಮಾಲಾ ಕಡಣಿ, ಮಹೇಶಚಂದ್ರ ಪಾಟೀಲ್ ಕಡಣಿ, ಸಂಗೀತಾ ಕೊರಳ್ಳಿ, ಸುವರ್ಣ ಮಡಿವಾಳ, ಗುರುಭೀಮ್ ಬೂದಿ, ರಾಹುಲ್ ರಾಠೋಡ್, ಸಚಿನ್ ಕಲ್ಲೂರ, ವಿಜಯಾನಂದ ಪಾಟೀಲ್ ಕಡಣಿ, ಕುಮಾರ ಕಡಣಿ ತಂಡದ ಸದಸ್ಯರು.
ಒಂದು ದಿನ ಬಸ್ಸಾ್ಟೃಂಡ್ನಲ್ಲಿ ವ್ಯಕ್ತಿಯೋರ್ವ ಹಸಿವಿನಿಂದ ಪರದಾಡುತ್ತಿದ್ದ, ಈತನ ಹೊಟ್ಟೆ ತುಂಬಿಸಲು ನಿರ್ಧರಿಸಿದ ಸಮಾನ ಮನಸ್ಕರು ನಾಲ್ಕು ಚಕ್ರ ತಂಡ ಶುರು ಮಾಡಿದರು. ಈ ತಂಡ ಮೊದಲು ಜನತೆಗೆ ಪಲಾವ್ ಸೇರಿ ಇನ್ನಿತರ ಆಹಾರ ವಿತರಿಸುತ್ತಿತ್ತು. ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಬೇಯಿಸಿದ ಆಹಾರ ಬಿಟ್ಟು ದಿನಸಿ ವಿತರಿಸಲು ಮುಂದಾಗಿದೆ.ಇವರೆಲ್ಲ ವಾತರ್ಾ ಇಲಾಖೆಯಿಂದ ಟ್ರೇನಿಂಗ್ ಪಡೆದಿದ್ದು, ಕರೊನಾ ವಾರಿಯಸರ್್ ಪಾಸ್ ಪಡೆದಿದ್ದಾರೆ. ಕೇವಲ ಆಹಾರದ ಕಿಟ್ ನೀಡದೆ, ಹಳ್ಳಿಗಳಲ್ಲಿ ಕರೊನಾ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಆಹಾರ ಕಿಟ್ನಲ್ಲಿ ಏನಿರಲಿದೆ?
ಪ್ರತಿಯೊಬ್ಬರಿಗೂ 10 ದಿನಗಳಿಗೆ ಆಗುವಷ್ಟು ದಿನಸಿ ಪದಾರ್ಥ ವಿತರಿಸಲು ನಾಲ್ಕು ಚಕ್ರ ತಂಡ ಮುಂದಾಗಿದೆ. ಆಹಾರ ಕಿಟ್ನಲ್ಲಿ 5 ಕೆಜಿ ಅಕ್ಕಿ, 2 ಕೆಜಿ ತೊಗರಿ ಬೇಳೆ, ತಲಾ 1 ಕೆಜಿ ರವಾ, ಆಹಾರ ಎಣ್ಣೆ, ಉಪ್ಪು, ಖಾರ ಹಾಗೂ ಅರಿಶಿಣ, ಮೈ ಸಾಬೂನು, ಬಟ್ಟೆ ಸಾಬೂನು, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆಯನ್ನು ಒಳಗೊಂಡಿದೆ.