ಹುಣಸಗಿ (ಗ್ರಾಮೀಣ): ಉಚಿತ ನೇತ್ರ ತಪಾಸಣಾ ಶಿಬಿರದಂತಹ ಒಂದಿಲ್ಲೊAದು ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ದಂಡಿನ್ ಕುಟುಂಬ ಬಡ ಜನರ ಸೇವೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿನ ಯುಕೆಪಿ ಕ್ಯಾಂಪ್‌ನ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಯಾದಗಿರಿ, ನಾಗಣ್ಣ ಸಾಹುಕಾರ ದಂಡಿನ್ ಹುಣಸಗಿ ವತಿಯಿಂದ ಶನಿವಾರ ಹಮ್ಮಿಕೊಂಡ ಉಚಿತ ನೇತ್ರ ಶಸ್ತç ಚಿಕಿತ್ಸಾ ಶಿಬಿರ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಸದಾ ಉಚಿತ ಆರೋಗ್ಯ ಸಂಬAಧಿಸಿದ ಕರ‍್ಯಕ್ರಮ ಆಯೋಜಿಸುವ ಮೂಲಕ ಪಟ್ಟಣ ಸೇರಿ ಸುತ್ತಲಿನ ಗ್ರಾಮೀಣ ಬಡ ಜನರಿಗೆ ದಂಡಿನ್ ಕುಟುಂಬ ನೆರವಾಗುತ್ತಿದೆ. ಅಲ್ಲದೆ ಈ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ತಮ್ಮ ನೇತ್ರ ತಪಾಸಣೆಗೆ ಆಗಮಿಸಿದ್ದು ನನಗೆ ವೈಯಕ್ತಿಕವಾಗಿ ಸಂತಸವಾಗಿದೆ. ಮುಂಬರುವ ದಿನಗಳಲ್ಲಿ ನಾಗಣ್ಣ ಸಾಹುಕಾರ ದಂಡಿನ್ ಅವರು ಇಂತಹ ಅನೇಕ ಜನಪರ ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಡವರಿಗೆ ನೆರವಾಗಲಿ ಎಂದು ಹಾರೈಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕರ‍್ಯಕ್ರಮದ ರೂವಾರಿ ಚಂದ್ರಶೇಖರ ದಂಡಿನ್ ಮಾತನಾಡಿ, ಸಾವಿರಕ್ಕೂ ಅಧಿಕ ಜನ ನೇತ್ರ ತಪಾಸಣೆ ಮಾಡಿಸಿಕೊಂಡಿದ್ದು, ಅದರಲ್ಲಿ ೪೫೦ಕ್ಕೂ ಹೆಚ್ಚು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ನಮ್ಮ ಸ್ವಂತ ಖರ್ಚಿನಲ್ಲಿಯೇ ಅವರಿಗೆ ಊಟ, ವಸತಿ, ಶಸ್ತç ಚಿಕಿತ್ಸೆ ಮಾಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ಸಾಹುಕಾರ ದಂಡಿನ್ ಮಾತನಾಡಿ, ೨೦೧೫ರಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಇದೀಗ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಬಂದು ನೇತ್ರ ತಪಾಸಣೆ ಮಾಡಿಕೊಂಡಿದ್ದು ನನಗೆ ಅತೀವ ಸಂತಸವಾಗಿದೆ ಎಂದರು.
ಶಾಸಕರ ಸಹೋದರ ರಾಜಾ ಸಂತೋಷಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಪ್ರಮುಖರಾದ ಮಲ್ಲಣ್ಣ ಸಾಹುಕಾರ ಮುಧೋಳ್, ಚನ್ನಯ್ಯಸ್ವಾಮಿ ಹಿರೇಮಠ, ವೆಂಕೋಬ ಸಾಹುಕಾರ ಮಂಗಳೂರು, ಗ್ರಾಪಂ ಮಾಜಿ ಅಧ್ಯಕ್ಷ ಶರಣು ದಂಡಿನ್, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಡಾ.ಎಸ್.ಬಿ.ಪಾಟೀಲ್, ಶರಣಗೌಡ ಪಾಟೀಲ್ ವಜ್ಜಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಎಂ.ರೇವಡಿ, ನಿಂಗರಾಜ ಬಾಚಿಮಟ್ಟಿ, ಮುದಿಗೌಡ ಕುಪ್ಪಿ, ಸಿದ್ರಾಮಪ್ಪ ಮುದಗಲ್, ಪಪಂ ಅಧ್ಯಕ್ಷ ತಿಪ್ಪಣ್ಣನಾಯಕ ರಾಠೋಡ, ಹಣಮಂತ್ರಾಯ ಮಕಾಶಿ, ಟಿ.ಎಸ್.ಚಂದಾ, ಹೊನ್ನಪ್ಪ ದೇಸಾಯಿ, ಬಾಬು ಸಾಹುಕಾರ, ಮಹಾಂತೇಶ ಮಲಗಲದಿನ್ನಿ ಇತರರಿದ್ದರು.
ತಾರಾನಾಥ ಚವ್ಹಾಣ್ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಖಾಸಗಿ ವೈದ್ಯರು ಭಾಗಿಯಾಗಿದ್ದು ವಿಶೇಷವಾಗಿತ್ತು.