ಜಿಲ್ಲೆ

ಬಡತನದಿಂದ ಶಿಕ್ಷಣ ವಂಚಿತ ಮಕ್ಕಳು

ಕಲಬುರಗಿ: ಬಡವರು ಆರ್ಥಿಕ ಸಂಕಷ್ಟದಿಂದ ಮಕ್ಕಳ ಶಿಕ್ಷಣ ರ‍್ಧಕ್ಕೆ ಮೊಟಕುಗೊಳಿಸಿ ಬಾಲ ಕರ‍್ಮಿಕರನ್ನು ಮಾಡುತ್ತಿರುವುದು ವಿಷಾಧನೀಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕರ‍್ಯರ‍್ಶಿ ಹಿರಿಯ ಸಿವಿಲ್​ ನ್ಯಾಯಧೀಶ ಶ್ರೀನಿವಾಸ ನವಲೆ ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ‍್ಮಿಕ ಇಲಾಖೆ ಜಿಲ್ಲಾ ಬಾಲ ಕರ‍್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ- ೧೦೯೮/೧೧೨, ವಿವಿಧ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಅಪ್ಪ ಪಬ್ಲಿಕ್​ ಶಾಲೆ ಸಭಾ ಮಂಟಪದಲ್ಲಿ ವಿಶ್ವ ಬಾಲ ಕರ‍್ಮಿಕ ವಿರೋಧಿ ದಿನದ ಕರ‍್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ರ‍್ಥಿಕವಾಗಿ ಹಿಂದುಳಿದವರಿದ್ದು, ಬಡ ಮಕ್ಕಳನ್ನು ಪೋಷಕರೇ ದುಡಿಯಲು ಹಚ್ಚುತ್ತಿರುವುದು ವಿಷಾಧನೀಯ. ಇದರ ನಿಮರ‍್ಲನೆಗೆ ಅಧಿಕಾರಿಗಳು ಶ್ರಮಿಸಬೇಕು. ರ‍್ಕಾರ ಗುರುತಿಸಿರುವ ಹಾಗೂ ವಿಶೇಷ ಅಧಿಕಾರ ನೀಡಿರುವ ೧೧ ಇಲಾಖೆ ಅಧಿಕಾರಿಗಳು ಸಹಕಾರದಿಂದ ಪ್ರಾಮಾಣಿಕ ಪ್ರಯತ್ನಿಸಿ ಜಿಲ್ಲೆಯನ್ನು ಬಾಲ ಕರ‍್ಮಿಕ ಮುಕ್ತ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ೧೭೭೦ ದಾಳಿ ಮಾಡಿ ೪೧ ಎಫ್​ಐಆರ್​ ದಾಖಲಿಸಿ ೪೭ ಬಾಲ ಕರ‍್ಮಿಕರನ್ನು ರಕ್ಷಿಸಿ, ಪುರ‍್ವವಸತಿ ಕಲ್ಪಿಸಲಾಗಿದೆ. ಎಲ್ಲ ಸೌಲಭ್ಯಗಳಿದ್ದರೂ ದುಡಿಯಲು ಹಚ್ಚುತ್ತಿರುವುದಕ್ಕೆ ಕುಟುಂಬದ ಪೋಷಕರ ಅನಕ್ಷರತೆ ಮತ್ತು ಬಡತನ ಮುಖ್ಯ ಕಾರಣ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನರ‍್ದೇಶಕ ಸರ‍್ಯಕಾಂತ ಮದಾನೆ ಮಾತನಾಡಿ, ಪೋಷಕರು ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಪದವಿ ಪರ‍್ವ ಸೇರಿಸಿ ೫ ಲಕ್ಷ ೨೮ ಸಾವಿರ ವಿದ್ಯರ‍್ಥಿಗಳು ಪ್ರವೇಶ ಪಡೆದಿದ್ದು, ೩೨೨೮ ಶಾಲೆಗಳಿಗೆ ೨೪೦೦೦ ಶಿಕ್ಷಕರು ಕರ‍್ಯನರ‍್ವಹಿಸುತ್ತಿದ್ದಾರೆ. ಮೇ.೨೯ ರಂದು ಶಾಲಾರಂಭವಾದರೂ ಶೇ.೪೫ ವಿದ್ಯರ‍್ಥಿಗಳು ಹಾಜರಾಗಿದ್ದಾರೆ. ಶೇ.೫೫ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದರು.

ಕಾನೂನು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ ಮಾತನಾಡಿ, ೧೪ ರ‍್ಷದ ಒಳಗಿನ ಮಕ್ಕಳು ಅಪಾಯಕಾರಿ ಸ್ಥಳಗಳಲ್ಲಿ ಕರ‍್ಯನರ‍್ವಾಹಿಸುವುದು ಶಿಕ್ಷರ‍್ಹ ಅಪರಾಧ ಎಂದರು.

ಬಾಲಕರ‍್ಮಿಕರ ರಕ್ಷಣೆಯಲ್ಲಿ ಸಹಕರಿಸಿದ ಪೊಲೀಸ್​ ಇಲಾಖೆಯ ರ‍್ಮದಾ, ಡಾನ್​ ಬಾಸ್ಕೋ ಶಾಲೆ ಪ್ರತಿನಿಧಿ ಫಾದರ್​ ಕೋರಿಕೋಸ್​, ಬಿಇಒ ಸೋಮಶೇಖರ ಹಂಚಿನಾಳ ಅವರನ್ನು ಸನ್ಮಾನಿಸಲಾಯಿತು.

ಶರಣಬಸವೇಶ್ವರ ವಿದ್ಯಾರ‍್ಧಕ ಸಂದ ಕರ‍್ಯರ‍್ಶಿ ಬಸವರಾಜ ದೇಶಮುಖ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ವಿಶ್ವಾರಾಧ್ಯಇಜೇರಿ, ಉಪ ಕರ‍್ಮಿಕ ಆಯುಕ್ತ ಡಾ.ವೆಂಕಟೇಶ ಎ.ಶಿಂದಿಹಟ್ಟಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನರ‍್ದೇಶಕಿ ಪ್ರೀತಿ ದೊಡ್ಡಮನಿ, ಆರ್​ಸಿಎಚ್​ ಡಾ.ಸಿದ್ದು ಪಾಟೀಲ್​, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ್​, ಜಿಲ್ಲಾ ಬಾಲ ಕರ‍್ಮಿಕ ಯೋಜನಾ ಸಂದ ಸದಸ್ಯ ಕರ‍್ಯರ‍್ಶಿ ಶಿವಕುಮಾರ ರೇಷ್ಮೆ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ ನರ‍್ದೇಶಕ ವಿಠ್ಠಲ್​ ಚಿಕಣಿ ಇತರರಿದ್ದರು.