ಜಿಲ್ಲೆ

ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಮದ್ದೂರು: ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 5 ಸಾವಿರ ಕುಟುಂಬಗಳಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಸಮಾಜ ಸೇವಕ ಕೆ.ಎಂ.ಉದಯ್ ತಿಳಿಸಿದರು.


ಶನಿವಾರ ಪಟ್ಟಣದ ವಿವಿಧ ಬಡಾವಣೆಗೆ ತೆರಳಿ ಕಡು ಬಡವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ದೀಪಾವಳಿ ಎಲ್ಲರಿಗೂ ಸಂಭ್ರಮದ ಹಬ್ಬವಾಗಿದೆ. ಹಬ್ಬ ಆಚರಿಸಲು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಆಹಾರ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.


ಶಿಂಷಾ ಬ್ಯಾಂಕ್ ನಿರ್ದೇಶಕ ಸತೀಶ್ ಮಾತನಾಡಿ, ಸಮಾಜ ಸೇವಕ ಉದಯ್ ಅವರು ದೀಪಾವಳಿ ಹಬ್ಬದ ಅಂಗವಾಗಿ ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದವರಿಗೆ ಉಚಿತವಾಗಿ ಆಹಾರ್ ಕಿಟ್ ನೀಡುತ್ತಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಪುರಸಭಾ ಸದಸ್ಯರಾದ ಮನೋಜ್, ಕಮಲ್‌ನಾಥ್, ಶಿಂಷಾ ಸಹಕಾರ ಬ್ಯಾಂಕ್ ನಿರ್ದೇಶಕ ಸತೀಶ್, ಗ್ರಾಪಂ ಸದಸ್ಯರಾದ ತಿಮ್ಮೇಗೌಡ, ಮಧು, ಮುಖಂಡರಾದ ಯತೀಶ್, ಹರೀಶ್, ಅಜ್ಜಹಳ್ಳಿ ಮನು, ಮನು, ಅವಿನಾಶ್, ರವಿ, ಕುಶಾಲ್, ರಾಜು, ಸಿದ್ದು, ನಟರಾಜು, ಭಾರ್ಗವ, ಹನ್ಸರ್ ಇದ್ದರು.