ಜಿಲ್ಲೆ

ಬಚ್ಚಾಖಾನ್ ಪ್ರೇಯಸಿಯೊಂದಿಗೆ ಸರಸಕ್ಕೆ ಅವಕಾಶ, ಪೊಲೀಸರ ಆತಿಥ್ಯ!

ಧಾರವಾಡ: ಭೂಗತ ಪಾತಕಿಗೆ ಆತನ ಪ್ರೇಯಸಿಯೊಂದಿಗೆ ಸರಸಕ್ಕೆ ಪೊಲೀಸರೇ ಅನುಕೂಲ ಮಾಡಿಕೊಟ್ಟ ಘಟನೆ ಶನಿವಾರ ನಡೆದಿದೆ. ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಚ್ಚಾಖಾನ್ ಬಳ್ಳಾರಿ ಜೈಲಿನಲ್ಲಿದ್ದ. ಈತನನ್ನು ಧಾರವಾಡದ ಕೋರ್ಟ್​ಗೆ ಹಾಜರು ಪಡಿಸಲು ಕರೆತರಲಾಗಿತ್ತು. ವಿಚಾರಣೆಗೆ ಬಂದ ಆರೋಪಿಗೆ ಪೊಲೀಸರೇ ಆತಿಥ್ಯ ನೀಡಿದ್ದಾರೆ. ರಾಯಾಪುರದ ಬಳಿಯ ಲಾಜ್ ಒಂದರಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಲಾಜ್​ನಲ್ಲಿ ಆತನ ಪ್ರೇಯಸಿ ಮೊದಲೇ ಬಂದು ತಂಗಿದ್ದಳು. ನಂತರ ಪೊಲೀಸರು ಈತನನ್ನು ಅದೇ ಲಾಜ್​ಗೆ ಕರೆತಂದು ಬೆಂಗಳೂರು ಮೂಲದ ಪ್ರೇಯಸಿಯೊಂದಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕುರಿತು ಅರಿತ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ್ ಹೊಟೇಲ್ ಮೇಲೆ ರೇಡ್ ಮಾಡಿಸಿದಾಗ ಬಚ್ಚಾಖಾನ್ ಸಿಕ್ಕಿಬಿದ್ದಿದ್ದಾನೆ.