ಸಾಗರ: ಮುಂದಿನ ಅವ„ಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅ„ಕಾರಕ್ಕೆ ಬರಲಿದೆ. ಬಗರ್‍ಹುಕುಂ ಮಂಜೂರಾತಿಗೆ ಇರುವ ಕಾನೂನು ತೊಡಕನ್ನು ಸದನದೊಳಗೆ ಚರ್ಚೆ ಮಾಡಿ, ತಿದ್ದುಪಡಿ ತರುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ಗುರುವಾರ ಕಂದಾಯ ಇಲಾಖೆಯಿಂದ 94 ಸಿ, 94 ಸಿಸಿ ಮತ್ತು ಬಗರ್‍ಹುಕುಂ ಅಡಿ 123 -Àಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಕಳೆದ ತಿಂಗಳು 402 ಜನರಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಇದೀಗ 123 -Àಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ಸಾವಿರಾರು ಅರ್ಜಿಗಳು ಬಾಕಿ ಇದ್ದು ಕಾನೂನು ತೊಡಕು ಇರುವುದರಿಂದ ಹಕ್ಕುಪತ್ರ ವಿತರಣೆಗೆ ತೊಡಕಾಗಿದೆ. ಸೊಪ್ಪಿನಬೆಟ್ಟ, ಪರಿಭಾವಿತ ಅರಣ್ಯ, ಗೋಮಾಳ, ಅರಣ್ಯ, ವನ್ಯಜೀವಿ ವಲಯ ಹೀಗೆ ಬೇರೆ ಬೇರೆ ಕಾನೂನಿನ ಸಂಕೋಲೆ ಅರ್ಹರಿಗೆ ಹಕ್ಕುಪತ್ರ ನೀಡಲು ಸಮಸ್ಯೆ ತಂದೊಡ್ಡಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಾಗುವಳಿ ಮಾಡುತ್ತಿದ್ದು ಮಂಜೂರಾತಿಗೆ ಅರ್ಜಿ ಸಲ್ಲಿಸಿದವರು ಒಕ್ಕಲೆಬ್ಬಿಸುತ್ತಾರೆ ಎನ್ನುವ ಭಯದಿಂದ ಹೊರಗೆ ಬನ್ನಿ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಅರ್ಹತೆ ಇದ್ದರೆ ಹಕ್ಕುಪತ್ರ ಖಂಡಿತಾ ಸಿಗುತ್ತದೆ ಎಂದು ಹೇಳಿದರು.
ಬಗರ್‍ಹುಕುಂ ಸಮಿತಿ ಸದಸ್ಯರಾದ ಆರ್.ಎಸ್.ಗಿರಿ, ರೇವಪ್ಪ ಹೊಸಕೊಪ್ಪ, ಗಂಗಮ್ಮ, ಲೋಕನಾಥ ಬಿಳಿಸಿರಿ, ಗಣೇಶ ಪ್ರಸಾದ್ ಇದ್ದರು. ಮೋಹನ್ ಪ್ರಾರ್ಥಿಸಿದರು. ತಹಸೀಲ್ದಾರ್ ಮಲ್ಲೇಶ್ ಬಿ. ಪೂಜÁರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಘು ವಂದಿಸಿದರು.