ಜಿಲ್ಲೆ

ಬಗರ್ ಹುಕಂ ಅಡಿ ಭೂ ಮಂಜೂರಾತಿ ನಿರ್ಲಕ್ಷ್ಯ: ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ

ಸಕಲೇಶಪುರ: ಬಗರ್ ಹುಕಂ ಅಡಿ ಭೂಮಂಜೂರಾತಿಗೆ ಶಾಸಕ ಹಾಗೂ ತಹಸೀಲ್ದಾರ್ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಮಾಡುತ್ತಿದ್ದಾರೆಂದು ಆರೋಪಿಸಿ ಅರ್ಜಿದಾರರು ಮಂಡಲ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗುರುವಾರ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು


ಬಗರ್ ಹುಕಂ ಸಮಿತಿಯ ಮುಂದೆ ಪಾರಂ 53 ಅಡಿ 2690 ಅರ್ಜಿ ಹಾಗೂ ಪಾರಂ 57 ರಡಿ 17600 ಅರ್ಜಿಗಳು ಸಲ್ಲಿಕೆಯಾಗಿದೆ. ಬಗರ್ ಹುಕಂ ಕಮಿಟಿ ರಚನೆಯಾಗಿ ಮೂರು ವರ್ಷಗಳು ತುಂಬುತ್ತಿದೆ. ಸರ್ಕಾರದ ನಿಯಮದಂತೆ ಪ್ರತಿ 15 ದಿನಕ್ಕೊಮ್ಮೆ ಸಮಿತಿ ಸಭೆ ನಡೆಸ ಬೇಕಿದೆ. ಆದರೆ, ಸಮಿತಿ ರಚನೆಯಾದಗಿನಿಂದ ಇದುವರಗೆ ಶಾಸಕರು ಕೇವಲ 5 ಸಭೆ ನಡೆಸಿದ್ದಾರೆ. ಗೋಮಾಳ ಜಾಗದಲ್ಲಿ ಸಾಗುವಳಿ ಮಾಡಿದ್ದರೆ, ಹಕ್ಕುಪತ್ರ ನೀಡುವಂತೆ ಸರ್ಕಾರವೇ ನಿರ್ದೇಶನ ನೀಡಿದೆ. ಆದರೆ, ಗೋಮಾಳ ಕಾರಣ ನೀಡಿ ಶಾಸಕರು ಅರ್ಜಿಗಳ ತಿರಸ್ಕರಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಗೋಮಾಳದಲ್ಲಿನ ಅಕ್ರಮ ಸಾಗುವಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದಲ್ಲದೆ ಬಗರ್ ಹುಕಂ ಸಮಿತಿ ಸದಸ್ಯರು ಮಾನ್ಯ ಮಾಡಿದ ಕಡತಗಳನ್ನು ಶಾಸಕರು ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸುಮಾಡುತಿದ್ದಾರೆ. ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ತಹಸೀಲ್ದಾರ್ ಉದ್ದೇಶಪೂರ್ವಕವಾಗಿ ತಪ್ಪು ಉತ್ತರ ನೀಡುವ ಮೂಲಕ ನಿರ್ದಿಷ್ಟ ರೈತರಿಗೆ ಹಕ್ಕುಪತ್ರ ದೊರೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಕಳೆದ ಹಲವು ಸಭೆಗಳಲ್ಲಿ ಮಂಜೂರಾತಿ ಪಡೆದ ರೈತರಿಗೆ ವಿವಿಧ ಕಾರಣ ಹೇಳುತ್ತ ಹಕ್ಕುಪತ್ರ ವಿತರಿಸಲು ತಹಸೀಲ್ದಾರ್ ವಿಳಂಭಮಾಡುತಿದ್ದಾರೆ. ಆದ್ದರಿಂದ, ತಹಸೀಲ್ದಾರ್ ವಿರುದ್ದ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದ ಪ್ರತಿಭಟನೆಕಾರರು ಶಾಸಕ ಎಚ್.ಕೆ ಕುಮಾರಸ್ವಾಮಿ ಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಶಿರಸ್ತೇಧಾರ್ ಉಮೇಶ್ ಅವರಿಗೆ ಮನವಿ ನೀಡಲಾಯಿತು.


ಪ್ರತಿಭಟನೆಯಲ್ಲಿ ಸಕಲೇಶಪುರ ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ, ಬಗರ್ ಹುಕಂ ಸಮಿತಿ ಸದಸ್ಯ ರಾಜ್‌ಕುಮಾರ್,ರೈತಮೊರ್ಚ ಅಧ್ಯಕ್ಷ ಮೋಹನ್,ಮಹಿಳಾಮೊರ್ಚ ಅಧ್ಯಕ್ಷೆ ನೇತ್ರವತಿಮಂಜುನಾಥ್, ಮಾಸುವಳ್ಳಿ ಚಂದ್ರು,ಸಂದೇಶ್ ಮುಂತಾದವರಿದ್ದರು.