ಜಿಲ್ಲೆ

ಬಂಧಿಸುತ್ತಾರೆಂದು ಹೆದರಿ ಆತ್ಮಹತ್ಯೆ

ಅಥಣಿ ಗ್ರಾಮೀಣ: ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸುತ್ತಾರೆಂದು ಹೆದರಿ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊರ್ವ ಆತ್ಮಹತ್ಯೆಗೆ ಯತ್ನಿಸಿದ್ದಾಗ ಪೊಲೀಸರು ಬಂಧಿಸಿದ ಟನೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಶೇಗುಣಸಿ ಗ್ರಾಮದ ಸುರೇಶ ರಾಮಪ್ಪ ಸವದತ್ತಿ (35) ಆತ್ಮಹತ್ಯೆ ಮಾಡಿಕೊಂಡವ. ಶ್ರೀಶೆಲ ಸಂಗಪ್ಪ ಹೊರಟ್ಟಿ (40) ವಶಕ್ಕೆ ಪಡೆದ ಆರೋಪಿ. ಈ ಕುರಿತು ಐಗಳಿ ಹಾಗೂ ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ವಾಸವಿದ್ದ ನಂದಗಾಂವ ಗ್ರಾಮದ ಚಂದ್ರವ್ವ ಅಪ್ಪಾರಾಯ ಇಚೇರಿ (65) ಹಾಗೂ ಈಕೆಯ ಮಗ ವಿಠ್ಠಲ ಅಪ್ಪಾರಾಯ ಇಚೇರಿ (42) ಇವರನ್ನು ಏ.12ರಂದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರವ್ವಳ ಸಹೋದರಿ ಮಗಳ ಪತಿ ಶೇಗುಣಸಿ ಗ್ರಾಮದ ಸುರೇಶ ಸವದತ್ತಿ ಪ್ರಮುಖ ಆರೋಪಿ ಎಂಬುವುದು ತನಿಖೆಯಿಂದ ತಿಳಿದು ಬಂದಿತ್ತು. ಬಂಧನ ಮಾಡಲು ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಸುರೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೋರ್ವ ಆರೋಪಿ ಶ್ರೀಶೈಲ ಹೊರಟ್ಟಿ ಕೂಡ ನೇಣಿಗೆ ಶರಣಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಾಯಿ&ಮಗನ ಜೋಡಿ ಕೊಲೆಗೆ ಹಣಕಾಸು ಹಾಗೂ ಆಸ್ತಿ ವಿಚಾರ ಕಾರಣ ಎಂದು ಶಂಕಿಸಲಾಗಿದೆ.