ಜಿಲ್ಲೆ

ಬಂದ್ ಬೆಂಬಲಿಸಿ ದುರ್ಗದಲ್ಲಿ ಪ್ರತಿಭಟನೆ

ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ,ಕನ್ನಡ ಪರ ಸಂಘಟನೆಗಳು ಮತ್ತಿತರ ಸಂ ಘ-ಸಂಸ್ಥೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ, ಶುಕ್ರವಾರ ನಗರದ ಗಾಂಧಿ ಮತ್ತಿತರೆಡೆ ಪ್ರತಿಭಟನೆ ನಡೆಯಿತು. ಕರುನಾಡ ವಿಜಯ ಸೇನೆ ಕಾರ‌್ಯಕರ್ತರು ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಗಳ ಮೇಲೆ ರಕ್ತ ಸುರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ,ಕರ್ನಾಟಕ ಸರ್ವೋದಯ ಪಕ್ಷದ ಕಾರ‌್ಯಕರ್ತರು,ರೈತ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಕರವೇ ಪ್ರವೀಣ್‌ಶೆಟ್ಟಿ ಬಣದ ಕಾರ‌್ಯಕರ್ತರು ಪ್ರವಾಸಿ ಮಂದಿರದ ಬಳಿ ಸಂಸದರ ಅಣುಕು ಶವಯಾತ್ರೆ ನಡೆಸಿದರು. ಸಂಸದರ ಅಣುಕು ಶವಯಾತ್ರೆ ನಡೆಸಿದರು. ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. 20ಕ್ಕೂ ಹೆಚ್ಚು ಪ್ರತಿಭ ಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಎಪಿಎಂಸಿಯಲ್ಲಿ ವಹಿವಾಟು ಕುಸಿತವಾಗಿತ್ತು,ಪೆಟ್ರೋಲ್ ಬಂಕ್‌ಗಳಲ್ಲಿ ವಹಿವಾಟು ಕ್ಷೀಣಿಸಿತ್ತು. ಹಲವು ಬಂಕ್‌ಗಳಲ್ಲಿ ಇಂಧನ ತುಂ ಬಿಸಲು ನಿರಾಕರಿಸಿದ್ದು,ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಆರಂಭವಾಗಿದ್ದರೂ,ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದೆ,ಆಟೋ ಮತ್ತಿ ತರ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಹಣ್ಣು,ತರಕಾರಿ ಮಾರುಕಟ್ಟೆ ಸಹಜ ಸ್ಥಿತಿಯಲ್ಲಿವೆ. ಅಂಗಡಿ ಮುಂಗಟ್ಟುಗಳು ನಿಧಾನವಾಗಿ ಆರಂಭವಾಗಿವೆ. ಬ್ಯಾಂಕ್,ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಎಂದಿನಂತೆ ಸಂಚರಿಸುತ್ತಿವೆ.
ಬಂದ್ ಹಿನ್ನೆಲೆಯಲ್ಲಿ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಜಿಲ್ಲಾಧ್ಯಂತ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಘೋಷಿಸಿದ್ದಾರೆ. ಬಲವಂತವಾಗಿ ಅಂಗಡಿ,ಮುಂಗಟ್ಟು,ಶಾಲಾ-ಕಾಲೇಜು ಮುಚ್ಚಿಸದಂತೆ ಎಸ್‌ಪಿ ಧರ್ಮೆಂದ್ರಕುಮಾರ್ ಎಚ್ಚರಿಕೆ ನೀಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.