ಜಿಲ್ಲೆ

ಬಂದೂಕು ತಯಾರಿಸುತ್ತಿದ್ದವನ ಬಂಧನ

ಕಾರವಾರ: ಅಕ್ರಮವಾಗಿ ನಾಡ ಬಂದೂಕು ತಯಾರು ಮಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ವಿಶೇಷ ತಂಡದ ಪೊಲೀಸರು ಬಂಧಿಸಿದ್ದಾರೆ.
ಗೋಪಶಿಟ್ಟಾ ಬರ್ನವಾಡ ಗ್ರಾಮದ ಸಂಜು ವಿನಾಯಕ ಆಚಾರಿ ಬಂಧಿತ.
ಎಸ್ ಪಿ ಡಾ.ಸುಮನ್ ಪೆನ್ನೇಕರ್ ಅವರಿಗೆ ಬಂದ ಮಾಹಿತಿ ಆಧಾರದಲ್ಲಿ‌ ವಿಶೇಷ ತಂಡದ ಪಿಎಸ್ ಐ   ಪ್ರೇಮನಗೌಡ  ಪಾಟೀಲ್, ಚಿತ್ತಾಕುಲಾ‌ ಪಿಎಸ್ ಐ ವಿಶ್ವನಾಥ ನಿಂಗೊಳ್ಳಿ, ಸಿಬ್ಬಂದಿ  ಎಚ್. ಸಿ ರಾಘವೇಂದ್ರ ಜಿ. ಗುರುರಾಜ ನಾಯ್ಕ, ಪಿ.ಸಿ. ಭಗವಾನ ಗಾಂವಕರ, ಸಂತೋಷ ಕೆ.ಬಿ. ತಂಡ ಕಾರ್ಯಾಚರಣೆ ನಡೆಸಿ ಬಂದೂಕು ಹಾಗೂ ಅದನ್ನು ತಯಾರು ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದೆ.‌ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.