ಜಿಲ್ಲೆ

ಬಂಡೆ ಸಾಹೇಬ್​ ಸಿನೆಮಾ ಬಿಡುಗಡೆ ನಾಳೆ

ಕಲಬುರಗಿ: ದಿ.ಪಿಎಸ್​ಐ ಮಲ್ಲಿಕರ‍್ಜುನ ಬಂಡೆ ಜೀವನಾಧಾರಿತ ಬಂಡೆ ಸಾಹೇಬ್​ ಸಿನೆಮಾ ಮೇ.೧೬ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನರ‍್ದೇಶಕ ಚಿನ್ಮಯ ರಾಮ್​ ತಿಳಿಸಿದರು.

ಸಿನಿಮಾದ ಬಹುಪಾಲು ಚಿತ್ರೀಕರಣ ಕಲಬುರಗಿ ಜಿಲ್ಲೆಯಲ್ಲಿ ಆಗಿದೆ. ಇನ್ನುಳಿದ ಚಿತ್ರೀಕರಣ ಬೆಂಗಳೂರು, ಶಿವಮೊಗ್ಗದಲ್ಲಿ ನಡೆದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಲ್ಲಿಕರ‍್ಜುನ ಬಂಡೆ ಪಾತ್ರದಲ್ಲಿ ಸಂತೋಷ ರಾಮ್​ ನಟಿಸಿದ್ದು, ನಾಯಕ ನಟಿಯಾಗಿ ಕಾವ್ಯಾ ಭಾರದ್ವಾಜ್​ ನಟಿಸಿದ್ದಾರೆ. ವೀರಣ್ಣ ಕೊರಳ್ಳಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಮಲಾ ಜಿ.ದೊಡ್ಮನಿ ಮತ್ತು ಮಾಲಾ ಕೊರಳ್ಳಿ ನಿಮರ‍್ಪಕರಾಗಿದ್ದಾರೆ. ಮುಂಜಾನೆ ಮಂಜು ಅವರ ಛಾಯಾಗ್ರಹಣ, ಎಂ.ಎಸ್​.ತ್ಯಾಗರಾಜ್​ ಅವರ ಸಂಗೀತ ನರ‍್ದೇಶನ ಚಿತ್ರಕ್ಕಿದೆ. ಅಲೆಕ್ಸಾ ಹಿನ್ನೆಲೆ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.

ಸಿನಿಮಾದ ನಿಮರ‍್ಪಕ ಗೋಪಣ್ಣ ದೊಡ್ಮನಿ ಮಾತನಾಡಿ, ರೂ.೧.೫ ಕೋಟಿ ಬಜೆಟ್​ನಲ್ಲಿ ಸಿನಿಮಾ ನರ‍್ಮಿಸಲಾಗಿದೆ. ೧ ಗಂಟೆ ೫೫ ನಿಮಿಷದ ಚಿತ್ರ ಇದಾಗಿದ್ದು, ನಾಲ್ಕು ಹಾಡುಗಳಿವೆ. ಮಲ್ಲಿಕರ‍್ಜುನ ಬಂಡೆ ಬಾಲ್ಯ, ವೃತ್ತಿ ಜೀವನದ ಕಥೆ ಸಿನಿಮಾದಲ್ಲಿದೆ ಎಂದರು.

ವೀರಣ್ಣ ಕೊರಳ್ಳಿ ಮಾತನಾಡಿ, ಮೇ ೧೬ರಂದು ಕಲಬುರಗಿಯ ಶೆಟ್ಟಿ ಮತ್ತು ಸಂಗಮ್​ ಸೇರಿ ರಾಜ್ಯದ ೫೫ ಚಿತ್ರಮಂದಿರಗಳಲ್ಲಿ ಬಂಡೆ ಸಾಹೇಬ್​ ಬಿಡುಗಡೆಯಾಗಲಿದೆ. ಬೆಳಗ್ಗೆ ೫.೩೦ಕ್ಕೆ ಸಂಗಮ್​ ಚಿತ್ರ ಮಂದಿರದಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೂಜೆ ಸಲ್ಲಿಸಲಿದ್ದಾರೆ ಎಂದರು.