ಹುಬ್ಬಳ್ಳಿ: ಹು-ಧಾ ಬಂಟರ ಸಂಘದ ಪದಗ್ರಹಣ ಸಮಾರಂಭ ನಗರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ನಿಕಟಪೂರ್ವ ಕಾರ್ಯಾಧ್ಯಕ್ಷ ಎಚ್. ದಿನೇಶ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಸಂಘದ ಆಜೀವ ಗೌರವಾಧ್ಯಕ್ಷರಾಗಿ ಡಾ. ಆರ್.ಎನ್. ಶೆಟ್ಟಿ , ಕಾರ್ಯಾಧ್ಯಕ್ಷರಾಗಿ ಎಸ್. ಸುಭಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಕೆ. ಸುಧಾಕರ ಶೆಟ್ಟಿ (ಸುಗ್ಗಿ), ಡಾ. ಡಿ.ಜಿ. ಶೆಟ್ಟಿ, ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಕೆ. ವೀರೇಂದ್ರ ಶೆಟ್ಟಿ ಮತ್ತು ಖಜಾಂಚಿಯಾಗಿ ಹರ್ಷಕುಮಾರ ಶೆಟ್ಟಿ ಅಧಿಕಾರ ಸ್ವೀಕರಿಸಿದರು.
ನೂತನ ಕಾರ್ಯಾಧ್ಯಕ್ಷ ಎಸ್. ಸುಭಾಶ್ಚಂದ್ರ ಶೆಟ್ಟಿ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಘದ ವಿವಿಧ ಉಪ ಸಮಿತಿಗೆ ನೇಮಕಗೊಂಡ ಸಂಚಾಲಕರಾದ ಬಿ. ಸಿ. ಶೆಟ್ಟಿ, ಮಹೇಶ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ, ಬಿ. ಶಾಂತಾರಾಮ ಶೆಟ್ಟಿ, ದಿನೇಶ ಶೆಟ್ಟಿ, ಡಾ. ಕೆ ಧನಾಪಾಲ ಹೆಗ್ಡೆ, ರಾಜೇಂದ್ರ ಶೆಟ್ಟಿ ಪಂಜುರ್ಲಿ, ಸುಧೀರ ಶೆಟ್ಟಿ, ದೀಪಕ ಶೆಟ್ಟಿ, ಕರುಣಾಕರ ಶೆಟ್ಟಿ, ರತ್ನಾಕರ ಶೆಟ್ಟಿ, ಸಿ. ಬಿ. ಶೆಟ್ಟಿ, ರಾಧಿಕಾ ಶೆಟ್ಟಿ, ಮಧುಕರ ಶೆಟ್ಟಿ ಹಾಗೂ ಮಹಿಳಾ ಸಂಚಾಲಕಿಯರಾಗಿ ನೇಮಕಗೊಂಡ ಶಿಲ್ಪಾ ಶೆಟ್ಟಿ, ರೇಷ್ಮಾ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಪ್ರತಿಮಾ ಶೆಟ್ಟಿ, ನಳಿನಾ ಶೆಟ್ಟಿ, ಮೋಹಿನಿ ಶೆಟ್ಟಿ, ಪರಿಮಳ ಶೆಟ್ಟಿ, ಸುರೇಖಾ ಶೆಟ್ಟಿ ಅವರಿಗೆ ಅಧಿಕಾರ ನೀಡಲಾಯಿತು.
ಬಿ. ಶಾಂತಾರಾಮ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಂದಿಸಿದರು.