ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ನಡೆದ ಬಂಟರ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಯನ್ನು ಸನ್ಮಾನಿಸಲಾಯಿತು. ಜಯರಾಂ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಇತರರಿದ್ದರು.  
ಜಿಲ್ಲೆ

ಬಂಟರ ಸಂಘ ಬಲಪಡಿಸಿ

ಟಿ.ಎಚ್.ಸಂತೋಷ್ ಕುಮಾರ್

ಹೊಸನಗರ: ಸರ್ಕಾರದ ಸೌಲಭ್ಯ ಸದುಪಯೋಗ ಪಡೆಯಲು, ಸಮುದಾಯದ ಘನತೆ ಹೆಚ್ಚಿಸುವ ಸಲುವಾಗಿ ಬಂಟರ ಸಂಘವನ್ನು ಬಲಗೊಳಿಸಬೇಕು ಎಂದು ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಹೇಳಿದರು.

ತಾಲೂಕಿನ ನಿಟ್ಟೂರಿನಲ್ಲಿ ಆಯೋಜಿಸಿದ್ದ ಬಂಟರ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಘಟನೆಗೆ ಬಹುದೊಡ್ಡ ಶಕ್ತಿ ಇದೆ. ಇಂದು ನಾಡವರು ವಿವಿಧೆಡೆ ಹರಿದು ಹಂಚಿಹೋಗಿದ್ದಾರೆ. ಅವರನ್ನು ಒಂದೆಡೆ ಸೇರಿಸಲು ಬಂಟರ ಸಂಘ ದಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖಂಡ ಜಯರಾಂ ಶೆಟ್ಟಿ ಮಾತನಾಡಿ, ಸಮುದಾಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ತಾಲೂಕಿನಲ್ಲಿ ಸಂಘವನ್ನು ಇನ್ನಷ್ಟು ಸದೃಢಗೊಳಿಸಲು ಬಂಟರು ಮುಂದೆ ಬರಬೇಕು ಎಂದರು.

ಸಮಾಜದ ತಾಲೂಕು ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ, ಮುಡುಬಾ ಶಿವರಾಮ ಶೆಟ್ಟಿ, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಚಂದ್ರಶೆಟ್ಟಿ, ರಿಪ್ಪನ್‌ಪೇಟೆ ವಲಯದ ಅಧ್ಯಕ್ಷ ವಿಜಯಕುಮಾರ ಶೆಟ್ಟಿ, ಗ್ರಾಪಂ ಸದಸ್ಯರಾದ ಶಂಕರಶೆಟ್ಟಿ, ಜಯಪ್ರಕಾಶ ಶೆಟ್ಟಿ, ರಾಜೇಶ ಶೆಟ್ಟಿ, ಶರತ ಶೆಟ್ಟಿ, ಪ್ರಮುಖರಾದ ನವೀನ ಶೆಟ್ಟಿ, ಶಶಿಕಲಾ, ನಾಗರತ್ನ, ರಾಮಣ್ಣ ಮೇಷ್ಟ್ರು, ಶ್ರೀಧರ ಶೆಟ್ಟಿ, ಶರತ್ ಶೆಟ್ಟಿ, ಬಾಸ್ಕರ ಶೆಟ್ಟಿ, ಪ್ರಮೀಳಾ, ಶ್ರೀವಾಸ ಶೆಟ್ಟಿ, ಉಪನ್ಯಾಸಕಿ ಮಾಲಾಶ್ರೀ ಶೆಟ್ಟಿ ಇದ್ದರು.

ನಿಟ್ಟೂರು ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ, ಸಂಪೇಕಟ್ಟೆ ಸರ್ಕಾರಿ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಯರಾಂ ಶೆಟ್ಟಿ, ಮೋಹನ ಶೆಟ್ಟಿ, ಶಿವರಾಮ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.