ಜಿಲ್ಲೆ

ಬಂಜಾರರಿಗೆ ಚೊಂಬು ನೀಡಿದ ಕಾಂಗ್ರೆಸ್

ರಮೇಶ ಮೇಳಕುಂದಾ

ಕಲಬುರಗಿ: ಬಂಜಾರ ಸಮುದಾಯದ ಓರ್ವ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ, ರಾಜ್ಯದಲ್ಲಿ ಒಂದು ಕ್ಷೇತ್ರದಲ್ಲಿ ಸಂಸದ ಟಿಕೆಟ್ ನೀಡಿಲ್ಲ. ಆದರೆ ಸೇವಾಲಾಲ್ ದೇವಸ್ಥಾನಕ್ಕೆ ಎರಡು ಎಕರೆ ಜಮೀನು ನೀಡುತ್ತೇನೆ ಎನ್ನುವ ಕ್ಷುಲಕ ರಾಜಕಾರಣ ಮಾಡಿ ಕಾಂಗ್ರೆಸ್ ಚೊಂಬು ನೀಡಿದೆ ಎಂದು ಬಂಜಾರ ಸಮಾಜದ ಯುವ ಮುಖಂಡ ಶ್ರೀಧರ ಚವ್ಹಾಣ್ ಆರೋಪಿಸಿದರು.
ಕಲಬುರಗಿ ವಿಮಾನ ನಿಲ್ದಾಣದ ಬಳಿ ಸೇವಾಲಾಲ್ ದೇವಸ್ಥಾನ ವಿಚಾರವಾಗಿ ಬಂಜಾರ ಸಮಾಜದ ಮುಗ್ದ ಗುರುಗಳನ್ನು ಮುಂದಿಟ್ಟುಕೊAಡು ರಾಜಕೀಯ ಮಾಡುತ್ತಿರುವುದು ಖಂಡನೀಯ. ಸಮಾಜದಲ್ಲಿ ಕಾಂಗ್ರೆಸ್ ಒಳಜಗಳ ಹಚ್ಚುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಂಜಾರ ಸಮಾಜದ ಮತ ವಿಭಜನೆ ಮಾಡಲು ಕಾಂಗ್ರೆಸ್ ಕಪಟ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸದ ಡಾ.ಉಮೇಶ ಜಾಧವ್ ದೇವಸ್ಥಾನಕ್ಕೆ ೧೦ ಎಕರೆ ಜಮೀನು ಮತ್ತು ರೂ.೧೦ ಕೋಟಿ ಮಂಜೂರು ಮಾಡಿಸಿz್ದÁರೆ. ಹೀಗೆ ಹಲವು ಅಭಿವೃದ್ಧಿ ಕಾರ್ಯ ಡಾ.ಜಾಧವ್ ಮಾಡಿದ್ದಾರೆ. ಕಾಂಗ್ರೆಸ್ ಸಮಾಜವನ್ನು ತುಳಿಯುತ್ತಲೇ ಬಂದಿದ್ದು, ಬಂಜಾರ ಮತ ಕೇಳುವ ನೈತಿಕೆ ಉಳಿಸಿಕೊಂಡಿಲ್ಲ ಎಂದರು.
ಗುAಡು ಚವ್ಹಾಣ್, ಗಿರೀಶ ನಾಯಕ, ಪ್ರಭುಲಿಂಗ ರಾಠೋಡ ಇದ್ದರು.