ಜಿಲ್ಲೆ

ಫೈಥಾನ್ ಲಾಂಗ್ವೇಜ್ ಕೃತಕ ಬುದ್ಧಿಮತ್ತೆಗೆ ಅಡಿಪಾಯ

ಚಿತ್ರದುರ್ಗ: ನಗರದ ಎಸ್‌ಜೆಎಂಐಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಫೈಥಾನ್ ಮತ್ತು ಮಷಿನ್ ಲರ್ನಿಂಗ್ ಕುರಿತು ಏರ್ಪಡಿಸಿದ್ದ 5 ದಿ ನಗಳ ಕಾರ‌್ಯಾಗಾರಕ್ಕೆ ಗುರುವಾರ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಚಾಲನೆ ನೀಡಿದರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಫೈಥಾನ್ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಮಹತ್ತರ ಪಾತ್ರವನ್ನು ವಹಿಸುತ್ತವೆ. ಫೈಥಾನ್ ಲಾಂಗ್ವೇಜ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಮೂಲ ಅಡಿಪಾಯವಾಗಿದೆ ಎಂದರು.

ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ಸಿದ್ದೇಶ್ ಮಾತನಾಡಿ,ಈ ಕಾರ್ಯಾಗಾರ ಉದ್ಯೋಗಾವಕಾಶಗಳೆಡೆ ಹೆಚ್ಚಿನ ಅರಿವು ಮೂಡಿಸುತ್ತದೆ ಎಂದರು. ಐಕ್ಯೂಎಸಿ ಸಂಚಾಲಕ ಡಾ.ಎ.ಎಂ.ರಾಜೇಶ್ ಮಾತನಾಡಿ,ಎಐ ತಂತ್ರಜ್ಞಾನಕ್ಕೆ ಫೈಥಾನ್ ಮತ್ತು ಮಷಿನ್ ಲ ರ್ನಿಂಗ್ ಮುಖ್ಯಪಾತ್ರ ವಹಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಎನ್.ಹರೀಶ್,ನಿತೀಶ್‌ಕುಮಾರ್,ಪ್ರೊ.ಟಿ.ಬಿ.ಲವಕುಮಾರ್,ಪ್ರೊ.ಜಿ.ಆರ್.ನಂದಿನಿ ಮತ್ತಿತರರು ಇದ್ದರು. ಪ್ರಣತಿ ಪ್ರಾರ್ಥಿಸಿದರು. ಸ್ಫೂರ್ತಿ ಸ್ವಾಗತಿಸಿ, ಶುಭಾ ಚಿನ್ಮಯಿ ನಿರೂಪಿಸಿದರು.

ಉಪನ್ಯಾಸ

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ವಿಭಾಗದಿಂದ ಶುಕ್ರವಾರ ಇಂಡಸ್ಟ್ರಿಯಲ್ ಎಲೆಕ್ಟ್ರಿಕಲ್ ಆಟೋ ಮೇಷನ್ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ವಿಭಾಗದ ಮುಖ್ಯಸ್ಥ ಡಾ.ಬಿ.ಜಿ.ಕುಮಾರಸ್ವಾಮಿ ಕಾರ‌್ಯಕ್ರಮ ಉದ್ಘಾಟಿಸಿದರು. ಐ ಕ್ಯೂಎಸಿ ಸಂಚಾಲಕ ಡಾ.ಎ.ಎಂ.ರಾಜೇಶ್,ಡೀನ್ ಅಕಾಡೆಮಿಕ್‌ನ ಡಾ.ಎಸ್.ಸಿ.ಮಂಜುನಾಥ್,ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜುಎಲೆಕ್ಟ್ರಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಎಸ್.ಧನುಷ್,ಡಾ.ಇ.ನಿರಂಜನ್,ಸಂಚಾಲಕಿ ಪ್ರೊ.ಟಿ.ಸುಧಾ ಇ ತರರು ಇದ್ದರು. ಕೇಸರ್ ಮಲನ್ ನಿರೂಪಿಸಿದರು.

ರಕ್ತದಾನ ಶಿಬಿರ

ನಗರದ ಎಸ್‌ಜೆಎಂಐಟಿಯಲ್ಲಿ ಈಚೆಗೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಯೂತ್ ರೆಡ್‌ಕ್ರಾಸ್ ಯುನಿಟ್‌ನಿಂದ ‘ಸಂವೇ ದನಾ-2’ಕಾರ‌್ಯಕ್ರಮದಡಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಉದ್ಘಾಟಿಸಿದರು.ಎನ್‌ಎಸ್‌ಎಸ್ ಘಟಕದ ಸಂಚಾಲಕ ಡಾ.ಇ.ನಿರಂಜನ್,ಯೂತ್ ರೆಡ್‌ಕ್ರಾಸ್ ಯುನಿಟ್ ಸಂಚಾಲಕ ಪ್ರೊ.ಆರ್.ಎಸ್.ಜಯದೇವಪ್ಪ,ಬಸವೇಶ್ವರ ಆಸ್ಪತ್ರೆ ರಕ್ತನಿಧಿ ವಿಭಾಗದ ಮುಖ್ಯಸ್ಥ ಶ್ರೀಪವನ್,ರೆಡ್ ಕ್ರಾಸ್ ಸಂಸ್ಥೆಯ ಅರುಣ್‌ಕುಮರ್, ಶ್ರೀನಿವಾಸ ಮಳಲಿ, ಗುರುಮೂರ್ತಿ,ರೋಟರಿಕ್ಲಬ್ ಅಧ್ಯಕ್ಷ ವೀರಣ್ಣ ಇತರರು ಇದ್ದರು.