ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೃತಿ ರಚನೆಕಾರ, ಬಿಟಿಡಿಎ ಮುಖ್ಯಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ, ಕಸಾಪ ಪದಾಽಕಾರಿ ಪಾಂಡುರಂಗ ಸಣ್ಣಪ್ಪನವರ್, ಅನಿಲ ಗುನ್ನಾಪುರ ಉಪಸ್ಥಿತರಿದ್ದರು. 
ಜಿಲ್ಲೆ

ಫೆ.೫ ರಂದು ದೀಡೆಕರೆ ಜಮೀನು ಕಥಾಸ ಸಂಕಲನ ಬಿಡುಗಡೆ

ಬಾಗಲಕೋಟೆ: ಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಕಾಚಕ್ಕಿ ಪ್ರಕಾಶನ ಮತ್ತು ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬಿಟಿಡಿಎ ಮುಖ್ಯ ಲೆಕ್ಕಾಧಿಕಾರಿ ಮಲ್ಲಿ ಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕಥಾ ಸಂಕಲನದ ಪುಸ್ತಕ ಬಿಡುಗಡೆ ಸಮಾರಂಭವು ಫೆ.೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ನವನಗರದ ಸೆಕ್ಟರ್ ನಂ.೨೪ ರ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಅಂದಿನ ಸಮಾರಂಭದ ಅಧ್ಯಕ್ಷತೆ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತ ಸಾಹಿತಿ ಡಾ.ಕುಂ ವೀರಭದ್ರಪ್ಪ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಪತ್ರಕರ್ತೆ ರಶ್ಮಿ ಎಸ್ ಕೃತಿ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕವಿ ಚೇತನ ನಾಗರಾಳ ಆಗಮಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃತಿ ರಚನೆಕಾರ, ಬಿಟಿಡಿಎ ಮುಖ್ಯಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ, ಕಸಾಪ ಪದಾಧಿಕಾರಿ ಪಾಂಡುರಂಗ ಸಣ್ಣಪ್ಪನವರ್, ಅನಿಲ ಗುನ್ನಾಪುರ ಉಪಸ್ಥಿತರಿದ್ದರು.