ಜಿಲ್ಲೆ

ಫೆ.೨೨ ರಿಂದ ೩ ದಿನಗಳ ಕಾಲ ರನ್ನವೈಭವ

ಬಾಗಲಕೋಟೆ: ಮುಧೋಳದಲ್ಲಿ ಫೆಬ್ರವರಿ ೨೨ ರಿಂದ ೨೪ ವರೆಗೆ ಹಮ್ಮಿಕೊಂಡ ರನ್ನವೈಭವದ ಹಿನ್ನಲೆಯಲ್ಲಿ ಹಮ್ಮಿಕೊಂಡ ರನ್ನರಥಯಾತ್ರೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಗುರುವಾರ ಚಾಲನೆ ನೀಡಿದರು.

ಮುಧೋಳ ತಾಲೂಕಿನ ರನ್ನ ಬೆಳಗಲಿಯ ರನ್ನ ಸರ್ಕಲ್‌ನಲ್ಲಿ ರನ್ನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಈ ರನ್ನರಥಯಾತ್ರೆ ರನ್ನ ಬೆಳಗಲಿಯಿಂದ ಪ್ರಾರಂಭವಾಗಿ ಮುಧೋಳ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಯ ೭೨ ಗ್ರಾಮಗಳಿಗೆ ಸಂಚರಿಸಿ ಮರಳಿ ರನ್ನ ಬೆಳಗಲಿಗೆ ಮುಕ್ತಾಯಗೊಳ್ಳಲಿದೆ. ರನ್ನರಥಯಾತ್ರೆ ಗ್ರಾಮಗಳಿಗೆ ಆಗಮಿಸಿದಾಗ ವಿಜೃಂಭಣೆಯಿAದ ಸ್ವಾಗತಿಸಿ, ಬೀಳ್ಕೊಡಬೇಕು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ರಥಯಾತ್ರೆ ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು.

ಈ ರನ್ನರಥ ರನ್ನನ ಗತ ವೈಭವ ಸಾರಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮವನ್ನು ದಾಖಲೆ ಮೀರಿ ಯಶಸ್ವಿಗೊಳಿಸಿ ರನ್ನವೈಭವ ಎಲ್ಲೆಡೆ ಪ್ರಸರಿಸುವಂತೆ ಮಾಡಲು ಎಲ್ಲರೂ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ತಿಳಿಸಿದರು. ರನ್ನರಥ ರನ್ನಬೆಳಗಳಿ ಪಟ್ಟಣದ ನಾನಾ ಕಡೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿರುವುದು ಮೆರವಣಿಗೆಗೆ ಮೆರಗು ತಂದಿತು.

ಇನೊ0ದು ರನ್ನರಥಯಾತ್ರೆ ಜಿಲ್ಲಾ ಮಟ್ಟದಲ್ಲಿ ಫೆಬ್ರವರಿ ೧೭ ರಿಂದ ೨೧ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ. ಮತ್ತೊಂದು ರಥ ರಾಜ್ಯ ಮಟ್ಟದ ರನ್ನರಥಯಾತ್ರೆ ಫೆಬ್ರವರಿ ೧೯ ರಿಂದ ೨೨ ವರೆಗೆ ನಡೆಯಲಿದೆ. ಪ್ರತಿಯೊಂದು ಹಂತದ ರನ್ನರಥಯಾತ್ರೆ ಯಶಸ್ವಿಗೊಳಿಸಲು ನೋಡಲ್ ಅಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ತಿಳಿಸಿದರು.

ರನ್ನರಥಯಾತ್ರೆಯಲ್ಲಿ ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಇದ್ದರು.