ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಚಿತ್ರದ ನಿರ್ದೇಶಕ ಹಯವದನ, ನಿರ್ಮಾಪಕ ಪವನ ಸಿಮಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ಮಾಪಕ ಪವನ ಸಿಮಿಕೇರಿ, ನಟಿ ವೆನ್ಯಾ ರೈ, ನಟ ದಾನಪ್ಪ ಕಿನ್ನಾಳ, ನಟ ಅಂಜನ್ ನಾಗೇಂದ್ರ ಇದ್ದರು.  
ಜಿಲ್ಲೆ

ಫೆ.೨೧ ಎಲ್ಲೋ ಜೋಗಪ್ಪ ನಿನ್ನ ಅರಮನೆ ಬಿಡುಗಡೆ

ಬಾಗಲಕೋಟೆ: ಎಲ್ಲೋ ಜೋಗಪ್ಪ ನಿನ್ನ ಅರಮನೆ ಚಲನಚಿತ್ರವು ಫೆ.೨೧ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹಯವದನ, ನಿರ್ಮಾಪಕ ಪವನ ಸಿಮಿಕೇರಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯಾದ್ಯಂತ ೫೦ ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿಗಳಲ್ಲಿ ಚಿತ್ರ ಏಕ ಕಾಲಕ್ಕೆ ತೆರೆ ಕಾಣಲಿದೆ. ಇಬ್ಬರು ಬಾಗಲಕೋಟೆ ಮೂಲದವರಾಗಿದ್ದು, ಜಿಲ್ಲೆಯ ಜನತೆ ಬೆಂಬಲಿಸಿ ಪ್ರೋತ್ಸಾಹ ನೀಡಬೇಕು. ಕುಟುಂಬ ಸಮೇತರಾಗಿ ನೋಡುವ ಚಿತ್ರವಾಗಿದೆ ಎಂದರು.

ನಿರ್ದೇಶಕ ಹಯವದನ ಮಾತನಾಡಿ, ಈ ಚಿತ್ರವು ಮೊದಲನೇ ನಿರ್ದೇಶನವಾಗಿದ್ದು, ಇದಕ್ಕೂ ಮುನ್ನ ಅಗ್ನಿಸಾಕ್ಷಿ, ನಾಗಿಣಿ, ಕಮಲಿ ಧಾರವಾಹಿಗಳನ್ನು ನಿರ್ದೇಶನ ಮಾಡಿದ್ದೇನೆ. ಪಾಂಡೋರಸ್ ಬಾಕ್ಸ್ ಪ್ರೊಡಕ್ಷನ್ ಮತ್ತು ಕೃಷ್ಣ ಛಾಯಾಚಿತ್ರ ಬ್ಯಾನರ್ ಅಡಿಯಲ್ಲಿ ಚಿತ್ರವು ನಿರ್ಮಾಣವಾಗಿದ್ದು, ನಿರ್ಮಾಪಕರಾಗಿ ಬಾಗಲಕೋಟೆಯವರೇ ಆದ ಪವನ ಸಿಮಿಕೇರಿ ಹಾಗೂ ಸಹ ನಿರ್ಮಾಪಕರಾಗಿ ಸಿಂಧು ಹಯವದನ ಕೆಲಸ ಮಾಡಿದ್ದಾರೆ ಎಂದರು.

ಈ ಚಿತ್ರವು ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದ ಬಹುತೇಕ ಭಾಗ ಬಾಗಲಕೋಟೆ, ವಿಜಯಪುರ, ಮಹಾರಾಷ್ಟçದ ಪಂಡರಾಪುರ, ಆಗ್ರಾ, ದೆಹಲಿ, ಮನಾಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಇದೊಂದು ಎಮೋಷನಲ್ ಫ್ಯಾಮಿಲಿ ಕಥೆಯಾಗಿದೆ. ಕಥಾ ನಾಯಕ ಆದಿ ಸೋಶಿಯಲ್ ಮೀಡಿಯಾದ ಅತೀಯಾದ ಪ್ರಭಾವಕ್ಕೆ ಒಳ ಗಾಗಿ ತನ್ನ ತಂದೆಯೊಡನೆ ಜಗಳವನ್ನು ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ. ಹೀಗೆ ದೇಶ ಅಲೆಯುತ್ತಾ ಹೊರಟ ಆದಿ ಮಹಾರಾಷ್ಟçದಲ್ಲಿ ಶೀತಲ್ ಅನ್ನೋ ಹುಡುಗಿಯನ್ನು ಭೇಟಿ ಮಾಡುತ್ತಾನೆ. ಅವರಿಬ್ಬರು ಒಟ್ಟುಗೂಡಿ ಮತ್ತೆ ಪ್ರಯಾಣವನ್ನು ಮುಂದುವರೆಸುತ್ತಾರೆ ಭಾರತ ದೇಶದ ಹತ್ತಾರು ರಾಜ್ಯಗಳಲ್ಲಿ ಪ್ರಯಾಣಿ ಸುತ್ತಿರುವಾಗ ಹಲವು ವ್ಯಕ್ತಿಗಳನ್ನು ಹಾಗೂ ಸಂದರ್ಭಗಳನ್ನು ಹಾದಿ ಎದುರಿಸುತ್ತಾನೆ. ಏನನ್ನೋ ಹುಡಕುತ್ತಾ ಬೆಂಗಳೂರಿನಿAದ ಹಿಮಾಲಯದ ವರೆಗೆ ಹೋದ ಆದಿಗೆ ಅವನು ಅನ್ಕೊಂಡಿದ್ದು, ಸಿಗುತ್ತಾ ಅನ್ನೋದೆ ಕಥೆಯ ಸಾರಾಂಶ ಎಂದು ವಿವರಿಸಿದರು.

ಈ ಚಿತ್ರದ ಛಾಯಾಗ್ರಾಹಕ ನಟರಾಜ್ ಮದ್ದಾಲ, ಸಂಕಲನ ಸಿ.ರವಿಚಂದ್ರನ್, ಸಂಗೀತ ಶಿವೋಮ್, ಸಾಹಿತ್ಯ ಪ್ರಮೋದ ಮರವಂತೆ ಮತ್ತು ರವೀಂದ್ರ ಮುದ್ದಿ, ಕಲಾ ನಿರ್ದೇಶನ ಹೊಸ ಮನೆ ಮೂರ್ತಿ, ತಾರಾಗಣದಲ್ಲಿ ಅಂಜನ್ ನಾಗೇಂದ್ರ, ವೆನ್ಯಾ ರೈ, ಸಂಜನಾ ದಾ ಸ್, ಶರತ್ ಲೋಹಿತಾಶ್ವ, ದಿನೇಶ ಮಂಗಳೂರು, ದಾನಪ್ಪ ಉಮೇಶ ಕಿನ್ನಾಳ, ವಿಠ್ಠಲ ಪರೀಟ್, ಸ್ವಾತಿ ಮತ್ತು ಇಳಾ ವಿಟ್ಲಾ ಇದ್ದಾರೆ.ನಾನು ಬಾಗಲಕೋಟೆಯವನು ಇದ್ದು ಎಲ್ಲರೂ ನಮಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ನಟ ಅಂಜನ್ ನಾಗೇಂದ್ರ ಮಾತನಾಡಿ, ಇದೊಂದು ಕೌಟಂಬಿಕ ಚಿತ್ರವಾಗಿದ್ದು ಅಪ್ಪ, ಮಗ, ತಾಯಿ, ಮಗನ ಸಂಬAಧವನ್ನು ಬಿಂಬಿ ಸುವಂತಹ ಒಳ್ಳೆಯ ಚಿತ್ರವಾಗಿದ್ದು ಇದು ನನ್ನ ಎರಡನೇ ಚಿತ್ರವಾಗಿದೆ ಎಂದರು.

ನಟಿ ವೆನ್ಯಾ ರೈ, ನಟ ದಾನಪ್ಪ ಕಿನ್ನಾಳ ಇದ್ದರು.