ಬಾಗಲಕೋಟೆ: ಬಾಗಲಕೋಟೆ ವಿದ್ಯಾಗಿರಿಯ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದಲ್ಲಿ ಸಾಣೇಹಳ್ಳಿ ಶ್ರೀಶಿವಕುಮಾರ ಕಲಾಸಂಘದಿAದ ಶಿವ ಸಂಚಾರ-೨೦೨೪ರ ನಿಮಿತ್ತ ಫೆ.೧೫,೧೬,೧೭ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ ಎಂದು ವಿದ್ಯಾಗಿರಿಯ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷರಾದ ಜಿ.ಎನ್ ಪಾಟೀಲ ಹೇಳಿದರು.
ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ, ವಿದ್ಯಾಗಿರಿ ಗೆಳೆಯರ ಬಳಗ, ಜಮಾಖಾನ ಕ್ಲಬ್,ಬಾಗಲಕೋಟೆ ಗೆಳೆಯ ಬಳಗದ ಸಹಯೋಗದಿಂದ ನಾಟಕಗಳು ಪ್ರದರ್ಶನವಾಗಲಿವೆ.
ಫೆ.೧೫ರಂದು ಸಂಜೆ ೭ ಗಂಟೆಗೆ ಸಾಹಿತಿ ಜಯಂತ ಕಾಯ್ಕಿಣಿ ಅವರ ರಚನೆ,ಹುಲಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ಜತೆಗಿರುವನು ಚಂದಿರ, ಫೆ.೧೬ರಂದು ಸಂಜೆ ೭ ಗಂಟೆಗೆ ಕೆ.ಎಸ್.ಸಾಳುಂಕೆ ಅವರ ರಚನೆ, ಮಾಲತೇಶ ಬಡಿಗೇರ ಅವರ ನಿರ್ದೇಶನದ ತಾಳಿ ತಕರಾರು, ಡಾ.ನಟರಾಜ್ ಬೂದಾಳ್ ಅವರ ರಚನೆ, ಸಿ.ಬಸಲಿಂಗಯ್ಯರವರ ನಿರ್ದೇಶನದ ಕಲ್ಯಾಣದ ಬಾಗಿಲು ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಈ ಶಿವಸಂಚಾರ ನಾಟಕೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಗಲಕೋಟೆ ಟಿಕಿನಮಠನ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯವಹಿಸಲಿದ್ದಾರೆ. ವಿದ್ಯಾಗಿರಿಯ ಶ್ರೀ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷರಾದ ಜಿ.ಎನ್ ಪಾಟೀಲ ಅಧ್ಯಕ್ಷತೆವಹಿಸಲಿದ್ದಾರೆ. ರಂಗಕರ್ಮಿ ಬಸವರಾಜ ಮಠ ಅವರು ನಾಟಕೋತ್ಸವ ಉದ್ಘಾಟನೆ ಮಾಡಲಿದ್ದಾರೆ.
ಬಾಗಲಕೋಟೆ ಜಮಖಾನ ಕ್ಲಬ್ ಕಾರ್ಯದರ್ಶಿ ಎಸ್.ಬಿ.ಗೌಡರ, ಬಾಗಲಕೋಟೆ ಗೆಳೆಯರ ಬಳಗದ ಅಧ್ಯಕ್ಷ ಎಂ.ಎ0.ಹ0ಡಿ, ವಿದ್ಯಾಗಿರಿ ಗೆಳೆಯರ ಬಳಗದ ಅಧ್ಯಕ್ಷ ಯಲ್ಲಪ್ಪ ಕ್ಯಾದಿಗೇರಿ, ಶ್ರೀಶೈಲ ಕರಿಶಂಕರಿ, ಶಿವಕುಮಾರ ಮೆಲ್ನಾಡ್,ಮಹಾಬಳೇಶ ಗುಡಗುಂಟಿ, ವಿನೋದ ಯಡಹಳ್ಳಿ,ವೀರಪ್ಪ ಶಿರಗಣ್ಣವರ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಕರಿಶಂಕರಿ, ಮಹಾಬಳೇಶ ಗುಡಗುಂಟಿ, ರಂಗನಗೌಡ ದಂಡಣ್ಣವರ ಇದ್ದರು.