ಜಿಲ್ಲೆ

ಫೆ.೧೫ ರಂದು ಸಂತ ಸೇವಾಲಾಲ ಜಯಂತಿ

ಬಾಗಲಕೋಟೆ: ಜಿಲ್ಲೆಯಲ್ಲಿ ಸಂತ ಸೇವಾಲಲ ಜಯಂತಿಯನ್ನು ಅದ್ದೂರಿಯಾಗಿ ಫೆ.೧೫ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಬಂಜಾರ ಸಮುದಾಯದ ಮುಖಂಡ ರಾಜು ಲಮಾಣಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಂತ ಸೇವಾಲಾಲ ಜಯಂತಿ ನಿಮಿತ್ತ ಪ್ರತಿ ತಾಂಡಾಗಳಲ್ಲಿ ವೃತ, ಕೀರ್ತನೆ, ಭಜನೆ ನಡೆಯುತ್ತಿದೆ. ಇನ್ನೂ ಅಯ್ಯಪ್ಪ ಮಾಲಾಧಾರಿಗಳ ಮಾದರಿಯಲ್ಲಿ ಬಂಜಾರ ಸಮುದಾಯದವರು ಮಾಲಾಧಾರಿ ಧರಿಸಿದ್ದು ಫೆ.೧೫ ರಂದು ನೆಡಯುವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಭಾಗವಹಿಸಲಿದ್ದಾರೆ ಎಂದರು.

ಜಯAತಿ ಅಂಗವಾಗಿ ನವನಗರದ ಜಿಲ್ಲಾಡಳಿತ ಭವನದಿಂದ ಸಕಲ ವಾಧ್ಯಗಳೊಂದಿಗೆ ಆರಂಭಗೊಳ್ಳುವ ಮೆರವಣಿಗೆ ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ನವನಗರದ ಕಲಾಭವನಕ್ಕೆ ತಲುಪಿ ವೇದಿಕೆಯ ಕಾರ್ಯಕ್ರಮವಾಗಿ ಮಾರ್ಪಡಲಿದೆ ಎಂದು ತಿಳಿಸಿದರು.

ಮುಖಂಡ ಮೋತಿಲಾಲ ಲಮಾಣಿ ಮಾತನಾಡಿ, ಬಂಜಾರ ಸಮುದಾಯದವರನ್ನು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮುಖಂಡರಾದ ಸುಭಾಸ ಲಮಾಣಿ, ತುಕರಾಮ ರಾಠೋಡ ಇದ್ದರು.