ಜಿಲ್ಲೆ

ಫೆ.20ಕ್ಕೆ ಗ್ರಾಮಸಭೆ ಮುಂದೂಡಿಕೆ

ಸಂಡೂರು: ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳ ಮರುಪರಿಶೀಲನೆ ಹಿನ್ನೆಲೆಯಲ್ಲಿ ಅಂತಾಪುರದಲ್ಲಿ ಸೋಮವಾರ ಗ್ರಾಮಸಭೆ ನಡೆಯಿತು.

ಪಿಡಿಒ ಗಂಗಾಧರ ಕೊಣ್ಣೂರ ಮಾತನಾಡಿ, ಹಳೆಯ 31ಅರ್ಜಿಗಳಿದ್ದು, ಹೊಸದಾಗಿ 74 ಅರ್ಜಿಗಳು ಸಲ್ಲಿಕೆಯಾಗಿವೆ. ಅಗತ್ಯ ದಾಖಲೆಗಳು ನೀಡದಿರುವ ಕಾರಣ ಫೆ.16ರವರೆಗೆ ಅರ್ಜಿಗಳನ್ನು ನೀಡಲು ಸಮಯಾವಕಾಶ ಕಲ್ಪಿಸಲಾಗಿದೆ. ಅನುಸೂಚಿತ ಬುಡಕಟ್ಟು ಮತ್ತು ಇತರ ಪರಂಪರೆ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಮಾನ್ಯ ಮಾಡುವ ಅಧಿನಿಯಮದಡಿ ಸಾಗುವಳಿದಾರರ ಅರ್ಜಿ ಪರಿಗಣಿಸಿ ಅರಣ್ಯ ಭೂಮಿ ಹಕ್ಕುಪತ್ರ ನೀಡಲು ಸಹಾಯಕ ಆಯುಕ್ತರ ನೇತೃತ್ವದ ವಿಭಾಗೀಯ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಲಾಗುವುದು. ಫೆ.20ರಂದು ಮುಂದಿನ ಗ್ರಾಮಸಭೆ ನಡೆಸಲಾಗುವುದೆಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಹೊನ್ನೂರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಪಂಪನಗೌಡ, ಕಾರ್ಯದರ್ಶಿ ಖಲಂದರ್ ಬಾಷಾ, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲುಬಾ, ವಿ.ಎಸ್.ಶಂಕರ, ರುದ್ರಪ್ಪ, ಮಲೆಮ್ಮ, ತಿಮ್ಮಪ್ಪ, ರಾಮಣ್ಣ, ದೊಡ್ಡ ಹುಲುಗಪ್ಪ, ಶಿವಮ್ಮ ಕೊಟ್ರೇಶ, ಅಗಸರ ಈರಮ್ಮ, ಮಲ್ಲಯ್ಯ, ಮಲ್ಲಿಕಾರ್ಜುನ, ಮಹಾಲಿಂಗ, ದುರುಗಪ್ಪ, ಮಾರಯ್ಯ, ರತ್ನಮ್ಮ, ಮಾರೆಮ್ಮ, ಗ್ರಾಪಂ ವ್ಯಾಪ್ತಿಯ ರೈತರು ಉಪಸ್ಥಿತರಿದ್ದರು.