ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ೩೯೫ ನೇ ಜಯಂತ್ಯೋತ್ಸವ ಫೆ.೧೯ ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮಾರಾಠಾ ಹಿತ ಚಿಂತಕ ಸಂಘ ಅಧ್ಯಕ್ಷ ಎಂ.ಆರ್.ಶಿ0ಧೆ ಹೇಳಿದರು.
ನಗರದ ಅಂಬಾ ಭವಾನಿ ದೇವಾಲಯದಲ್ಲಿ ಶನಿವಾರ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಭಾರಿಯು ಅದ್ದೂರಿಯಾಗಿ ಆಚರಣೆ ಮಾಡುವ ಉದ್ದೇಶದಿಂದ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಪ್ರಮುಖ ಭಾಷಣಕಾರಾಗಿ ಆಗಮಿಸಲಿz್ದÁರೆ.
ಈ ಹಿನ್ನಲೆ ಹೊಳೆ ಆಂಜನೇಯ ದೇವಾಲಯ ಬಳಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಬೆಳಗಿನ ಜಾವ ಶಾಸಕ ಎಚ್.ವೈ.ಮೇಟಿ ಭಗವಾ ಧ್ವಜಾರೋಹಣ ನಂತರ ಶಿವಾಜಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ೪ ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯೊಂದಿಗೆ ಭವ್ಯ ಶೋಭಾ ಯಾತ್ರೆ, ಕುಂಭ ಮೇಳ ಮೂಲಕ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಮುಖಂಡ ಗುಂಡೂರಾವ ಶಿಂಧೆ ಮಾತನಾಡಿ, ಚಕ್ರವರ್ತಿ ಸೊಲಿಬೆಲೆ ಬರುತ್ತಿರುವ ಹಿನ್ನಲೆ, ಅಂಭಾಭವಾನಿ ದೇವಾಲಯ ಎದುರು ಸ್ಥಳದ ಅಭಾವ ಉಂಟಾಗಲಿದೆ. ಈ ಹಿನ್ನೆಲೆ ಆಂಜನೇಯ ದೇವಾಲಯ ಎದುರು ವೇದಿಕೆ ನಿರ್ಮಾಣ ಮಾಡಿ, ಅದ್ದೂರಿಯಾಗಿ ಆಚರಿಸಲು ನಿರ್ಧಾರ ಮಾಡಲಾಗಿದೆ ಎಂದರು.
ಗುಳೇದಗುಡ್ಡ ಮುರಡಿಮಠ ಕಾಡಸಿದ್ದೇಶ್ವರ ಸ್ವಾಮೀಜಿ ವಹಿಸಲಿz್ದÁರೆ. ಸಂಸದರಾದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡೆಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಇತರರ ಗಣ್ಯರು ಭಾಗವಹಿಸಲಿz್ದÁರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಾಜು ವಾಘ, ನಿವೃತ್ತ ಪಿಎಸ್‌ಐ ಜಾಧವ ತಾಣಾಜೀ ಜಮಖಂಡಿ, ಭೀಮಸಿ ಮೊರೆ, ಮಾರುತಿ ನಲವಡೆ, ರಾಜು ಶಿಂಧೆ, ದಯಾನಂದ ಶಿಂಧೆ ಉಪಸ್ಥಿತರಿದ್ದರು.