ಬಾಗಲಕೋಟೆ: ಐತಿಹಾಸಿಕ ಶ್ರೀ ಮೋಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಫೆ.5 ರಿಂದ ಆರಂಭವಾಗಲಿದ್ದು, ಫೆ.12 ರಂದು ಮಹಾರಥೋತ್ಸವ ಜರುಗಲಿದ್ದು, ಜಾತ್ರಾ ಮಹೋತ್ಸವ ಯಶಸ್ವಿಗೊಳಿಸೋಣ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದ ಚರಂತಿಮಠದ ಸಭಾಭವನದಲ್ಲಿ ಬುಧವಾರ ಸಂಜೆ ಮೋಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಪ್ರತಿವಷÀðದಂತೆ ಈ ಸಲವೂ ಭಾರತ ಹುಣ್ಣಿಮೆಗೆ ನಡೆಯಲಿರುವ ಮೋಟಗಿ ಬಸವೇಶ್ವರ ಜಾತ್ರಾಮಹೋತ್ಸವವು -É.೭ ರಿಂದ ಆರಂಭವಾಗಿ ಐದು ದಿನಗಳ ಕಾಲ ಸಣ್ಣ ರಥೋತ್ಸವ ಜರುಗಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಾಗಿದೆ ಎಂದರು.
ಜಾತ್ರಾ ಮಹೋತ್ಸವಕ್ಕೆ ಬೇಕಾಗುವ ಎಲ್ಲ ಸಿದ್ದತೆಗಳನ್ನು ಜಾತ್ರಾ ಕಮೀಟಿ ಈಗಾಗಲೆ ಮಾಡಿಕೊಂಡಿದೆ. ನೂತನ ಜಾತ್ರಾ ಉತ್ಸವ ಸಮಿತಿ ನೂತವಾಗಿ ರಚನೆ ಮಾಡಿದ್ದು, ಮೋಟಗಿ ಬಸವೇಶ್ವರ ಜಾತ್ರೆ ಹಾಗೂ ಹುಚ್ಚಯ್ಯ ಏಳೆಯುವ ಉತ್ಸವ ಸಮಿತಿ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಿ ಪದಾಽಕಾರಿಗಳು, ಸದಸ್ಯರನ್ನು ನೇಮಿಸಲಾಗಿದೆ. ಜಾತ್ರೆಯೂ ಅಚ್ಚುಕಟ್ಟಾಗಿ ಅದ್ದೂರಿಯಾಗಿ ಜರುಗುವಂತೆ ರೂಪರೇಷ ರಚಿಸಲಾಗಿದೆ. ಎಲ್ಲರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಜಾತ್ರೆ ಯಶಸ್ವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಗುರುಬಸವ ಸೂಳಿಬಾವಿ, ಈರಣ್ಣ ಅಥಣಿ, ಪ್ರಕಾಶ ರೇವಡಿಗಾರ, ಮಹೇಶ ಕಕರೆಡ್ಡಿ, ಮಹಾಂತೇಶ ಶೆಟ್ಟರ, ಸಿ.ವಿ.ಕೋಟಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಜಾತ್ರಾ ಸಮಿತಿ ಅಧ್ಯಕ್ಷ ಸದಾನಂದ ನಾರಾ, ಉಪಾಧ್ಯಕ್ಷ ತಮ್ಮಣ್ಣ ಯಳ್ಳಿಗುತ್ತಿ, ಮುರಗೇಶ ಶಿವಣಗುತ್ತಿ, ಸಂಗಮೇಶ ಗುಡ್ಡದ, ಸಂತೋಷ ಜಕಾತಿ ಇದ್ದರು.