ಜಿಲ್ಲೆ

ಫುಲೆ-ಮಾತೋಶ್ರೀ ಜಯಂತಿ 7ಕ್ಕೆ

ಬೀದರ್: ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಾಗೂ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಜಯಂತ್ಯುತ್ಸವ ಫೆ. 7ರಂದು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.

ನಗರದಲ್ಲಿ ಬುಧವಾರ ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ, ಗೊಂಡಪರ, ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಮುಖಂಡ ಬಾಬುರಾವ ಪಾಸ್ವಾನ್ ಮಾತನಾಡಿ, ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಎಲ್ಲರೂ ಸಹಕರಿಸಬೇಕು. ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದರು.

ಅಂಬೇಡ್ಕರ್ ವೃತ್ತ ಹತ್ತಿರ ಕಾರ್ಯಕ್ರಮ ಮಾಡಲು ಅನುಮತಿ ನೀಡುವ ಕುರಿತು ಡಿಸಿ, ಎಸ್ಪಿ ಹಾಗೂ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಹುಮನಾಬಾದ್ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಅಮೃತರಾವ ಚಿಮಕೋಡೆ, ಬಸವರಾಜ ಮಾಳಗೆ, ಬಕ್ಕಪ್ಪ ದಂಡಿನ್, ಕಲ್ಯಾಣರಾವ ಭೋಸ್ಲೆ, ಶಾಲಿವಾನ ಬಡಿಗೇರ, ರಾಜಕುಮಾರ ಬನ್ನೇರ್, ಅಂಬಾದಾಸ ಗಾಯಕವಾಡ, ಬಾಬುರಾವ ಮಿಠಾರೆ, ಶ್ರೀಪತರಾವ ದೀನೆ, ಅರುಣ ಕುದರೆ, ಶಿವಕುಮಾರ ನೀಲಿಕಟ್ಟಿ, ದಿಲೀಪ ಭೋಸ್ಲೆ, ಜಾನ್ ವೆಸ್ಲಿ, ಸುನೀಲ ಬಚ್ಚನ್, ಅರುಣ ಪಟೇಲ್, ಅಶೋಕ ಮಾಳಗೆ, ಸುಬ್ಬಣ್ಣ ಕರಕನಳ್ಳಿ, ಸಾಯಿಸಿಂಧೆ, ಶಿವಕುಮಾರ ತುಂಗಾ, ಅವಿನಾಶ ದೀನೆ, ಮಲ್ಲಿಕಾರ್ಜುನ ಮೊಳಕೇರೆ ಇತರರಿದ್ದರು.