ಧಾರವಾಡ: ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಸಮಾರೋಪಗೊಂಡಿದ್ದು, ಫಲಿತಾಂಶ ಇಂತಿದೆ.
ಸಾಂಸ್ಕೃತಿಕ ಸ್ಪರ್ಧೆಗಳು: ಜಾನಪದ ಗೀತೆ ವೈಯಕ್ತಿಕ ವಿಭಾಗದಲ್ಲಿ ಮೈಸೂರಿನ ಎಚ್.ಎಸ್. ಲಿಂಗರಾಜ (ಪ್ರಥಮ), ಹಾಸನದ ಶುಭಾ ಎಚ್.ಸಿ, (ದ್ವೀತಿಯ), ಧಾರವಾಡದ ಸದಾಶಿವ ಮರ್ಜಿ (ತೃತೀಯ), ಸಮೂಹ ಜಾನಪದ ಗೀತೆ ವಿಭಾಗದಲ್ಲಿ ಶಿವಮೊಗ್ಗದ ತೀರ್ಥಕುಮಾರ ಮತ್ತು ತಂಡ (ಪ್ರ), ಧಾರವಾಡದ ಸದಾಶಿವ ಮರ್ಜಿ ಮತ್ತು ತಂಡ (ದ್ವಿ) ಹಾಗೂ ಹಾವೇರಿಯ ಜಗದೀಶ ಮತ್ತು ತಂಡ (ತೃ) ಸ್ಥಾನ ಪಡೆದಿದ್ದಾರೆ.
ಭರತನಾಟ್ಯ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಶ್ವೇತಾ ಪ್ರಿಯದರ್ಶಿನಿ (ಪ್ರ), ನಯನಾ ಪ್ರಸನ್ನ (ದ್ವಿ), ಉತ್ತರ ಕನ್ನಡದ ಪ್ರಮೀಳಾ ಕೆ.ಎಸ್ (ತೃ), ಕಥಕ್ ಸ್ಪರ್ಧೆಯಲ್ಲಿ ಮೈಸೂರಿನ ಚೈತ್ರಾ (ಪ್ರ), ದಕ್ಷಿಣ ಕನ್ನಡ ಜಿಲ್ಲೆಯ ಸುಮಂಗಲಾ (ದ್ವಿ), ಚಿಕ್ಕಮಗಳೂರಿನ ನಿಶಮಾಜೈನ್ (ತೃ), ಓಡಿಸ್ಸಿ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಿಲನಾ ಕೆ.ಭರತ (ಪ್ರ), ಶಿವಮೊಗ್ಗದ ವೈ.ಅನಿತಾ (ದ್ವಿ), ಶಿವಮೊಗ್ಗದ ಕೀರ್ತಿಮಾಲಾ (ತೃ), ಮಣಿಪುರಿ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರದ ಲೀಲಾವತಿ ಎಸ್.ಎಂ. (ಪ್ರ), ಬೆಂಗಳೂರು ನಗರದ ಸುರೇಖಾ (ದ್ವಿ), ಶಿವಮೊಗ್ಗದ ಕೀರ್ತಿಮಾಲಾ (ತೃ) ಸ್ಥಾನ, ಸಮೂಹ ಜಾನಪದ ನೃತ್ಯ ಸ್ಪರ್ಧೆತಲ್ಲಿ ಬೆಂಗಳೂರು ನಗರದ ಆಶಾರಾಣಿ ಎಂ ಮತ್ತು ತಂಡ (ಪ್ರ), ಶಿವಮೊಗ್ಗದ ಗವಿಯಪ್ಪ ಎಲ್.ಟಿ ಮತ್ತು ತಂಡ (ದ್ವಿ), ಗದಗ ಜಿಲ್ಲಯ ಕೆ.ಜಿ. ಕುರಿಯವರ ಮತ್ತು ತಂಡ (ತೃ) ಸ್ಥಾನ ಪಡೆದಿದ್ದಾರೆ.
ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಹಾಸನದ ಶಿವಕುಮಾರ ಆಚಾರಿ (ಪ್ರ), ಚಿಕ್ಕಬಳ್ಳಾಪುರದ ವಿಶಾಲಾಕ್ಷಿ (ದ್ವಿ), ದಾವಣಗೆರೆ ಜಿಲ್ಲೆಯ ಎಂ.ಡಿ. ಆಂಜನೇಯ (ತೃ), ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಸನದ ಎಂ.ಎಸ್. ನಾಗಮಣಿ (ಪ್ರ), ಶಿವಮೊಗ್ಗದ ದೀಪಾ ಭಟ್ಟ (ದ್ವಿ), ರಾಮನಗರದ ಡಾ. ರಜನಿ ರಮೇಶ (ತೃ) ಸ್ಥಾನ ಪಡೆದಿದ್ದಾರೆ.
ಸ್ಟ್ರಿಂಗ್ ಮತ್ತು ವಿಂಡ್ ವಾದ್ಯ ಸಂಗೀತದಲ್ಲಿ ತುಮಕೂರಿನ ಪುರುಷೋತ್ತಮ (ಪ್ರ), ಹಾವೇರಿಯ ಜಗದೀಶ ಮಡಿವಾಳರ (ದ್ವಿ), ಧಾರವಾಡದ ನಾಗರಾಜ ಗೇಣಿವಾಳದ (ತೃ), ವಿಂಡ್ ವಾದ್ಯದಲ್ಲಿ ಹಾಸನದ ಭಾರದ್ವಾಜ್ (ಪ್ರ), ವೆಂಕಟೇಶ ಎಚ್.ಪಿ. (ದ್ವಿ), ಹಾವೇರಿಯ ರವೀಂದ್ರ ಮಳಗಿ (ತೃ) ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟ ಫಲಿತಾಂಶ: ಟೆನಿಸ್ ಸ್ಪರ್ಧೆಯ 45 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್ನಲ್ಲಿ ಡಾ.ಸಚ್ಚಿದಾನಂದ (ಪ್ರ), ಭರತ್ ಒಂಟಕುದರಿ (ದ್ವಿ), ಡಬಲ್ಸ್ನಲ್ಲಿ ಯೋಗೇಶ ಮತ್ತು ರಘು ಶಂಕರ (ಪ್ರಥಮ), ರಾಜೇಂದ್ರ ಪ್ರಸಾದ್ ಮತ್ತು ನಾರಾಯಣ್ ಸ್ವಾಮಿ (ದ್ವಿ), ಓಪನ್ ಸಿಂಗಲ್ಸ್ನಲ್ಲಿ ನಾಯಕ ಬಿ.ಟಿ. (ಪ್ರ), ಕುಮಾರಸ್ವಾಮಿ (ದ್ವಿ), ಓಪನ್ ಡಬಲ್ಸ್ನಲ್ಲಿ ಕುಮಾರಸ್ವಾಮಿ ಮತ್ತು ಸಚ್ಚಿದಾನಂದ (ಪ್ರ), ನಾಯಕ್ ಬಿ.ಟಿ. ಮತ್ತು ರಾಜೇಂದ್ರ ಪ್ರಸಾದ್ (ದ್ವಿ) ಸ್ಥಾನ ಪಡೆದಿದ್ದಾರೆ. ಮಹಿಳೆಯರ ಓಪನ್ ಸಿಂಗಲ್ಸ್ನಲ್ಲಿ ಸುಧಾ ವಿ. (ಪ್ರ), ಗಾಯತ್ರಿ ಕೆ. (ದ್ವಿ) ಸ್ಥಾನ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟ ಸಿಂಗಲ್ಸ್ನಲ್ಲಿ ಅನುಸೂಯಾ ಎಚ್. (ಪ್ರ), ಜ್ಯೋತಿ ಎನ್. (ದ್ವಿ) ಸ್ಥಾನ ಪಡೆದಿದ್ದಾರೆ. ಟೇಬಲ್ ಟೆನಿಸ್ ಪುರುಷರ 45 ವರ್ಷದೊಳಗಿನ ವಿಭಾಗದಲ್ಲಿ ಕಲಬುರ್ಗಿಯ ಸಾಹೇಬಗೌಡ ಪಾಟೀಲ (ಪ್ರ), ಬೆಂಗಳೂರು ನಗರದ ರಾಜನಾಥ ಕೆ.ಎಂ (ದ್ವಿ), ಡಬಲ್ಸ್ನಲ್ಲಿ ಸಾಹೇಬಗೌಡ ಪಾಟೀಲ ಮತ್ತು ಸುನೀಲ ಎಲ್ (ಪ್ರ), ಬಿ.ಎಂ. ತಮ್ಮಯ್ಯ ಮತ್ತು ರಾಜನಾಥ ಕೆ.ಎಂ (ದ್ವಿ) ಸ್ಥಾನ ಪಡೆದಿದ್ದಾರೆ.
45 ವರ್ಷ ಮೇಲ್ಪಟ್ಟ ಟಿಟಿ ಸಿಂಗಲ್ಸ್: ಧಾರವಾಡದ ಶಶಿಧರ ಡಮ್ಮಳ್ಳಿ (ಪ್ರ), ದಾವಣಗೆರೆಯ ಡಾ. ಶ್ರೀಕಾಂತ ಆರ್. (ದ್ವಿ), ಚಿಕ್ಕಮಗಳೂರಿನ ಹರ್ಷವರ್ಧನ ಟಿ.ಕೆ (ತೃ) ಹಾಗೂ ಮಹಿಳೆಯರ ಸಿಂಗಲ್ಸ್ನಲ್ಲಿ ಮಂಡ್ಯದ ಮೇಘಾ ಎಸ್.ಎಂ (ಪ್ರ), ಡಾ. ರಕ್ಷಿತಾ ಪಿ. (ದ್ವಿ) ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ನಲ್ಲಿ ಕಲಬುರಗಿ ಕಲರವ: ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆ (ಪ್ರ), ಶಿವಮೊಗ್ಗ ತಂಡ (ದ್ವಿ), ಜೆಎಸ್ಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆ (ಪ್ರ), ಬೀದರ ತಂಡ (ದ್ವಿ) ಮತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಲಬುರಗಿ ತಂಡ (ಪ್ರ) ಹಾಗೂ ರಾಯಚೂರು ತಂಡ (ದ್ವಿ) ಸ್ಥಾನ ಪಡೆದಿವೆ.</