ಜಿಲ್ಲೆ

ಫುಟ್‌ಪಾತ್ ಮೇಲಿನ ಹೂವಿನ ಅಂಗಡಿ ತೆರವು

ಹಾಸನ: ನಗರದ ಮಹಾವೀರ ವೃತ್ತದಲ್ಲಿ ನಿಗದಿತ ಸ್ಥಳಾವಕಾಶ ಮೀರಿ ಪಾದಚಾರಿ ರಸ್ತೆ ಮಧ್ಯೆ ಹಾಕಿದ್ದ ಹೂವಿನ ಅಂಗಡಿಗಳನ್ನು ಮಂಗಳವಾರ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಮಹಾವೀರ ವೃತ್ತ, ಸಿಟಿ ಬಸ್ ನಿಲ್ದಾಣದ ಎದುರು ಸೇರಿ ನಗರದಲ್ಲಿ ಎಲ್ಲೆಂದರಲ್ಲಿ ಗೂಡಂಗಡಿ ಹಾಕಿಕೊಂಡರು ಸಾರ್ವಜನಿಕರಿ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಫುಟ್‌ಪಾತ್ ಮೇಲಿದ್ದ ಹೂವಿನ ಅಂಗಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ವೇಳೆ ಕೆಲಸ ಸಮಯ ವ್ಯಾಪರಸ್ತರಿಂದ ವಾಗ್ವಾದ ಕೂಡ ಉಂಟಾಯಿತು.