ಸೈಯದ್ ಫಕ್ರುದ್ದೀನ್ ಶಾಖಾದ್ರಿ  
ಜಿಲ್ಲೆ

ಫಾತೇಹಕ್ಕೆ ಅವಕಾಶ ನೀಡದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ಬಾಬಾಬುಡನ್ ದರ್ಗಾದಲ್ಲಿ ಫಾತೇಹಕ್ಕೆ ಅವಕಾಶ ನೀಡದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಅವರನ್ನು ಬೇರೆಡೆಗೆ ವರ್ಗಾವಣೆ ಗೊಳಿಸಬೇಕು ಎಂದು ಸೈಯದ್ ಫಕ್ರುದ್ದೀನ್ ಶಾಖಾದ್ರಿ ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಿ, ಜಾತ್ಯತೀತ ಕಾರ್ಯನಿರ್ವಹಣಾಧಿಕಾರಿ ಮತ್ತು ಸಮಿತಿಯನ್ನು ರಚಿಸಬೇಕು. ದರ್ಗಾ ಸಂಸ್ಥೆಯ ಆಚರಣೆಗಳನ್ನು ನಿರ್ವಹಿಸಲು ಹಿಂದಿನAತೆ ಶಾಖಾದ್ರಿಗಳ ಸಮಿತಿ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.

ನಮ್ಮ ಧಾರ್ಮಿಕ ಅಭ್ಯಾಸವನ್ನು ಮಾಡುವುದಕ್ಕೆ ಪೊಲೀಸರ ಮೂಲಕ ತಡೆಹಿಡಿದಿದ್ದಾರೆ. ದರ್ಗಾ ಸಂಸ್ಥೆಯ ಅಧಿಕಾರಿಯಾಗಿ ದರ್ಗಾದ ಆಚರಣೆಯ ವಿರುದ್ಧವೇ ಕಾರ್ಯನಿರ್ವಹಿಸುತ್ತಿರುವುದು ನೋವುಂಟುಮಾಡಿದೆ. ನೀವು ಫಾತೇಹಕ್ಕೆ ಹೋಗಬೇಕೆಂದರೆ ಹಿಂದೂ ಧರ್ಮದ ಪ್ರಕಾರ ಹಣ್ಣು, ಕಾಯಿ ತೆಗೆದುಕೊಂಡು ಬಂದರೆ ಅವಕಾಶಮಾಡಿಕೊಡುವುದಾಗಿ ತಿಳಿಸಿದ್ದರು ಎಂದು ದೂರಿದರು.

ಡಿ. ೨೯ರಂದು ಸೈಯದ್‌ಬುಡನ್ ಶಾಖಾದ್ರಿ ವಂಶಸ್ಥರು ಹಾಗೂ ದರ್ಗಾದ ಭಕ್ತರ ಜೊತೆಗೆ ಐಡಿಪೀಠ ಗ್ರಾಮದ ಬಾಬಾಬುಡನ್ ದರ್ಗಾದಲ್ಲಿ ಹಿಂದಿನAತೆ ಫಾತೇಹ ಮಾಡಲು ಹೋಗಿದ್ದಾಗ ಹೊಸದಾಗಿ ನೇಮಕಗೊಂಡಿರುವ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಧಾರ್ಮಿಕ ಆಚರಣೆಗೆ ಅವಕಾಶಮಾಡಿಕೊಡಲಿಲ್ಲ ಎಂದು ಆರೋಪಿಸಿದರು.

ಕಳೆದ ೧೯೩೭ರ ಹಿಂದೆ ಇರುವ ಮೈಸೂರು ಗ್ಯಾಜೆಟಿಯರ್ ನೋಡಿ, ಸರ್ವೋಚ್ಚ ನ್ಯಾಯಾಲಯದ ೧೯೯೧ರ ಆದೇಶ ಪಾಲನೆ ಮಾಡಿ ಎಂದರೆ ಅದು ನಮಗೆ ಮುಖ್ಯವಲ್ಲ, ನಮಗೆ ವ್ಯವಸ್ಥಾಪನಾ ಸಮಿತಿ ಮತ್ತು ಸರ್ಕಾರದ ಆದೇಶ ಮುಖ್ಯ ಎಂದು ತಿಳಿಸಿದರು. ಫಾತೇಹಕ್ಕೆ ಅವಕಾಶ ನೀಡುವಂತೆ ಡಿ. ೨೪ರಂದು ನೀಡಿರುವ ಪತ್ರಕ್ಕೆ ಉತ್ತರವನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅಬ್ರಾರ್, ಸಾಬಾಜ್, ಶಾರುಖಾದಿ, ತನ್ವಿರ್ ಉಪಸ್ಥಿತರಿದ್ದರು.