ಕೆಂಭಾವಿ: ಇAದಿನ ಆಧುನಿಕ ಜಗತ್ತಿನಲ್ಲಿ ನಮಗೆ ಬಯಸಿದ ಅನೇಕ ಚಿತ್ರ, ವಿಡಿಯೋ ಸೇರಿ ಅನೇಕ ಚಟುವಟಿಕೆ ಕ್ಷಣಾರ್ಧದಲ್ಲಿಯೇ ನೋಡಬಹುದಾದ ಈ ಕಾಲಘಟ್ಟದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಗಲು ವೇಷಧಾರಿಗಳ ನಾಟಕ ಇಂದಿಗೂ ಜನತೆಗೆ ತೋರಿಸಿ ಜನಪದ ಕಲೆ ಉಳಿಸಿ ಬೆಳೆಸುವಲ್ಲಿ ಕರಡಕಲ್ ಗ್ರಾಮದ ಚನ್ನಬಸವ ನೇತೃತ್ವದ ವೇಷಧಾರಿಗಳ ತಂಡ ನಿರಂತ್ರ ಶ್ರಮಿಸುತ್ತಿದೆ.
ತಮ್ಮ ಐದನೇ ತಲೆಮಾರಿನಿಂದ ಪರಂಪರಾಗತವಾಗಿ ಬಂದ ಈ ಕಲೆ ಉಳಿಸಲು ಮತ್ತು ರಾಮಾಯಣ, ಮೋಹಿನಿ, ಭಸ್ಮಾಸುರದಂಥ ಹಲವು ಪೌರಾಣಿಕ ಹಿನ್ನೆಲೆಯುಳ್ಳ ನಾಟಕದ ಪಾತ್ರ ಜನತೆಗೆ ತೋರಿಸುವುದೇ ಇವರ ಮುಖ್ಯ ಉz್ದೆÃಶ. ರಾಮ, ಲಕ್ಷö್ಮಣ, ಸೀತೆ, ಹನುಮಂತ, ಕಂಸ, ಮೋಹಿನಿ ಸೇರಿ ಹಲವು ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಬಲ್ಲ ಇವರ ನಾಟಕದ ಕಲೆ ಎಂಥವರಿಗೂ ಹುಬ್ಬೇರಿಸುವಂತೆ ಮಾಡುತ್ತದೆ.
ಪ್ರತಿ ವರ್ಷ ಮಳೆಗಾಲ ಆರಂಭವಾಗುವ ಮೊದಲು ವಿವಿಧ ಗ್ರಾಮಗಳಿಗೆ ತೆರಳಿ ಬೀದಿ ಬಿದಿಗಳಲ್ಲಿ ನಾಟಕದ ಮೂಲಕ ಕಥೆಯನ್ನು ಹೇಳುವುದೇ ವೇಷಧಾರಿಗಳ ಮುಖ್ಯ ಕಸುಬಾಗಿದೆ.
ಒಂದು ಊರಿನಲ್ಲಿ ಐದು ದಿನಗಳಂತೆ ಸುಮಾರು ಐವತ್ತು ಗ್ರಾಮಗಳಿಗೂ ಹೆಚ್ಚು ಕಡೆ ತಮ್ಮ ಕಲೆಯನ್ನು ನಾಟಕದ ಮೂಲಕ ಪ್ರದರ್ಶನಗೊಳ್ಳಲಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಅಭಿನಯದಲ್ಲೆ ತಲ್ಲೀನತೆ ಹೊಂದಿರುವ ಈ ತಂಡದ ಪ್ರತಿಯೊಬ್ಬ ಪಾತ್ರಧಾರಿಗಳ ಮಾತುಗಳು ಎಂಥಾ ಕಲಾವಿದರನ್ನೂ ನಾಚಿಸುವಂತಿದೆ.
ಹರ‍್ಮೋನಿಯA, ತಬಲಾ ಸೇರಿ ವಿವಿಧ ಸಂಗೀತ ವಾದ್ಯ ನುಡಿಸುವುದರ ಜತೆಗೆ ಅಭಿನಯದಲ್ಲೂ ಸೈ ಎನಿಸಿಕೊಂಡಿರುವ ಇವರ ಕಲೆ ವಿಶಿಷ್ಠವಾಗಿದೆ. ಐದು ದಿನಗಳ ನಂತರ ಪ್ರತಿಯೊಂದು ಮನೆಗೆ ಬರುವ ಈ ತಂಡ ಅವರು ಕೊಟ್ಟ ಬಟ್ಟೆ ಹಣ ಇತ್ಯಾದಿ ಸಾಮಾನು ತೆಗೆದುಕೊಂಡು ಹೋಗುವುದು ವಾಡಿಕೆ.
ಕೆಂಭಾವಿಯಲ್ಲಿ ಕರಡಕಲ್ ಗ್ರಾಮದ ಹಗಲು ವೇಷಧಾರಿಗಳ ತಂಡದಿAದ ಮನಮೋಹಕ ಪೌರಾಣಿಕ ನಾಟಕ ಪ್ರದರ್ಶನ.