ಚಿಕ್ಕಮಗಳೂರು: ನಗರದ ಶಂಕರಪುರ ಕೊಳಚೆ ಪ್ರದೇಶದಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪೌರಕಾರ್ಮಿಕರಿಗೆ ಪ್ರತಿದಿನ ಮೊಟ್ಟೆ ವಿತರಿಸಬೇಕು ಎಂದು ಒತ್ತಾಯಿಸಿ ಭೀಮರಾವ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಶಿರಸ್ತೇದಾರ್ ಮನು ಅವರ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಟಿ.ರಮೇಶ್, ನಗರದ ಪುರಿಭಟ್ಟಿ, ತಮಿಳು ಕಾಲನಿ, ಆದರ್ಶ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಂಡಳಿಯಿAದ ಹಕ್ಕು ಪತ್ರ ವಿತರಿಸಲಾಗಿದೆ. ಅದರಂತೆ ಶಂಕರಪುರ ಫಲಾನುಭವಿಗಳೂ ಮನೆ ನಿರ್ಮಿಸಿಕೊಂಡು ವಾಸವಾಗಿದ್ದು ಇದುವರೆಗೂ ಯಾವುದೇ ದಾಖಲಾತಿಗಳಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಹಲವಾರು ಭಾರಿ ಸಂಬAಧಿಸಿದ ಕಚೇರಿಗಳಲ್ಲಿ ಹಕ್ಕುಪತ್ರ ಮಾಡಿಕೊಡಲು ಮನವಿ ಸಲ್ಲಿಸಲಾಗಿದೆ. ಆದರೂ ಇಲ್ಲಿಯವರೆಗೂ ಅಧಿಕಾರಿಗಳು ಖಾತೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಶಂಕರಪುರದಲ್ಲಿ ದಿನಗೂಲಿ ಕೆಲಸ ಹಾಗೂ ಪೌರಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.
ಈ ನಿವಾಸಿಗಳಿಗೆ ಸೌಲಭ್ಯಗಳು ಪಡೆಯಬೇಕಾದರೆ ಸಮರ್ಪಕ ಹಕ್ಕುಪತ್ರ, ನೊಂದಾಯಿತ ದಾಖಲೆಗಳು ಕೇಳುವ ಹಿನ್ನೆಲೆ ಮಂಡಳಿಯಿAದ ಹಕ್ಕುಪತ್ರ ನೀಡಿ ನೊಂದಾಯಿಸಬೇಕು ಎಂದು ಒತ್ತಾಯಿಸಿದರು.
ನೇರ ಪಾವತಿ ಮತ್ತು ಪೌರಕಾರ್ಮಿಕ ಆರೋಗ್ಯದ ದೃಷ್ಟಿಯಿಂದ ಪೌಷ್ಠಿಕ ಆಹಾರದ ಸಲುವಾಗಿ ವಾರವೀಡಿ ಮೊಟ್ಟೆ ವಿತರಣೆ ಮಾಡಬೇಕು. ಆದರೆ ನಗರಸಭೆ ಆಡಳಿತವು ವಾರದಲ್ಲಿ ಸೋಮವಾರ, ಶನಿವಾರ ಎರಡು ದಿನ ಮೊಟ್ಟೆಯನ್ನು ನೀಡದೇ ಪೌರಕಾರ್ಮಿಕರಿಗೆ ವಂಚನೆ ಮಾಡುತ್ತಿದೆ ಎಂದು ದೂರಿದರು.
ಈ ಸಂಬAಧ ಅಧಿಕಾರಿಗಳಲ್ಲಿ ಅನೇಕ ಬಾರಿ ಕಾರ್ಮಿಕರು ಕೇಳಿಕೊಂಡರೂ ಯಾವುದೇ ಕ್ರಮ ವಹಿಸಿಲ್ಲ. ಬದಲಿಗೆ ದುರ್ನಡತೆಯಿಂದ ಮಾತನಾಡಿದ್ದಾರೆ. ಪ್ರಸ್ತುತ ಪೌರಕಾರ್ಮಿಕರು ಪೌಷ್ಠಿಕ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಮೊಟ್ಟೆಯನ್ನೆ ನೀಡದೇ ಲಕ್ಷಾಂತರ ರೂ.ಗಳ ಹಣವನ್ನು ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ದೃಷ್ಟಿಯಿಂದ ವಾರವಿಡಿ ಮೊಟ್ಟೆ ವಿತರಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷö್ಯ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಸದಸ್ಯರಾದ ರಾಜಣ್ಣ, ಸದಾ, ಕೀರ್ತಿ, ಕಿರಣ್, ಕೌಶಿಕ್, ಚಂದ್ರ, ಸಂತೋಷ್, ಹರ್ಷ, ನವೀನ್, ರವಿ, ಸತ್ಯನಾರಾಯಣ್ ಮತ್ತಿತರರಿದ್ದರು.