ಜಿಲ್ಲೆ

ಫಲಾನುಭವಿಗಳಿಗೆ ಚೆಕ್ ವಿತರಣೆ

ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿAದ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮ ಬುಧವಾರ ಜರುಗಿತು. ಎಸ್‌ಬಿಐ ಆರ್‌ಬಿಒ ಪ್ರಾದೇಶಿಕ ವ್ಯವಸ್ಥಾಪಕ ದೇವಕಿನಂದನ್ ಖಂಡೇಲವಾಲ್, ಲೀಡ್ ಬ್ಯಾಂಕ್ ಕಚೇರಿ ಎಫ್‌ಎಫ್‌ಸಿ ಗೋಪಾಲ ಕುಲಕರ್ಣಿ ಅವರು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಕುರಿತು ಸಾರ್ವಜನಿಕರಿಗೆ ಮತ್ತು ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿಯ ಫಲಾನುಭವಿ ಶರಣಬಸಪ್ಪ ಎಸ್. ಅವರಿಗೆ ೨ ಲಕ್ಷ ರೂ., ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಫಲಾನುಭವಿ ಹಣಮಂತರಾಯ ಅಂಕಲಗಿ ಅವರಿಗೆ ೨ ಲಕ್ಷ ರೂ. ವಿಮಾ ಕ್ಲೆÊಮ್ ಇತ್ಯರ್ಥ ಚೆಕ್ ಅನ್ನು ವಿತರಿಸಲಾಯಿತು.
ನಿಂಬರ್ಗಾ ಎಸ್‌ಬಿಐ ಶಾಖೆ ವ್ಯವಸ್ಥಾಪಕ ಮಹೇಶ್ವರ ರೆಡ್ಡಿ, ಕಲಬುರಗಿ ಎಸ್‌ಬಿಐ ಆರ್‌ಬಿಒ ಎಫ್-೧ ಮ್ಯಾನೇಜರ್ ಅಮರನಾಥ ಪಿ ಇದ್ದರು.