ಜಿಲ್ಲೆ

ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ವಿತರಣೆ

ಚನ್ನಬಸಯ್ಯ ಗುರುವಿನ

ಕಲಬುರಗಿ : ಮಹಾನಗರ ಪಾಲಿಕೆಯಲ್ಲಿ ಸ್ವಾತಂತ್ರೊÈÃತ್ಸವ ಅಂಗವಾಗಿ ಮಂಗಳವಾರ ವಿವಿಧ ಯೋಜನೆ ಅಡಿ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್, ಗ್ರಂಥಾಲಯಗಳಿಗೆ ಪುಸ್ತಕ ಮತ್ತು ಆಯ್ಕೆಪತ್ರವನ್ನು ಮೇಯರ್ ವಿಶಾಲ್ ದರ್ಗಿ ವಿತರಣೆ ಮಾಡಿದರು. ವಿವಿಧ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಹಾಗೂ ಹಾಲಿ ಯೋಧರನ್ನು ಸತ್ಕರಿಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ/ಕೆಪಿಎಸ್‌ಸಿ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಾಗಿ ಬೆಂಗಳೂರಿನ ಯುನಿರ್ವಸಲ್ ಕೋಚಿಂಗ್ ಸೆಂಟರ್‌ನಲ್ಲಿ ನೀಡಲಾಗುತ್ತಿರುವ ಒಂದು ವರ್ಷದ ಅವಧಿಗೆ ತರಬೇತಿ ಪಡೆಯಲು ೧೧ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆಯ್ಕೆ ಪತ್ರ ನೀಡಲಾಯಿತು. ಪರಿಶಿಷ್ಟ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಓದಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿ/ಎಸ್ಟಿ ಪಂಗಡ ೨೯ ವಿದ್ಯಾರ್ಥಿ ವಸತಿನಿಲಯ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಮಹಾವಿದ್ಯಾಲಯದಲ್ಲಿನ ಗ್ರಂಥಾಲಯಗಳಿಗೆ ಕೃತಿಗಳನ್ನು ನೀಡಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೧೧ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಸೇರಿದ ೮ ಮಹಿಳಾ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್, ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗೂ ಪುರುಷ ಕಾರ್ಮಿಕರಿಗೆ ರೇನ್‌ಕೋಟ್ ವಿತರಿಸಲಾಯಿತು.
ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ್, ಉಪ ಮಹಾಪೌರ ಶಿವಾನಂದ ಪಿಸ್ತಿ,ಆಡಳಿತ ಪಕ್ಷ ನಾಯಕ ಕೃಷ್ಣಪ್ಪ ನಾಯಕ, ವಿರೋಧಪಕ್ಷ ನಾಯಕ ಅಜ್ಮಲ್ ಗೋಲಾ, ಉಪ ಆಯುಕ್ತರಾದ ಪ್ರಕಾಶ ರಜಪೂತ, ಆರ್.ಪಿ ಜಾಧವ, ಪ್ರಹ್ಲಾದ ಕುಲಕರ್ಣಿ ಇದ್ದರು.