ಚಿಕ್ಕಮಗಳೂರಿನ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ರೋಟರಿ ಕ್ಲಬ್ ಸಂಸ್ಥಾಪನ ದಿನದ ಅಂಗವಾಗಿ ಪಥ ಸಂಚಲನದಲ್ಲಿ ಭಾಗವಹಿಸುವ ವಿಶೇಷಚೇತನ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಅನ್ನು ರೋಟರಿ ಕ್ಲಬ್‌ನಿಂದ ವಿತರಿಸಲಾಯಿತು. ಎಂ.ಎಲ್.ಸುಜಿತ್, ಲಕ್ಷö್ಮಣಗೌಡ, ಎನ್.ಪಿ.ಲಿಖಿತ್ ಮತ್ತಿತರರಿದ್ದರು. 
ಜಿಲ್ಲೆ

ಫಲಪೇಕ್ಷೆಯಿಲ್ಲದೇ ರೋಟರಿ ಕ್ಲಬ್ ಕಾರ್ಯನಿರ್ವಹಣೆ

ಚಿಕ್ಕಮಗಳೂರು: ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ವೃದ್ದಾಪ್ಯರ ಸೇವೆಗೆ ಅನುಗುಣವಾಗಿ ಮೂಲಸವಲತ್ತನ್ನು ವಿತರಿಸುವ ಸಾಮಾಜಿಕ ಕಾರ್ಯದಲ್ಲಿ ಸಂಸ್ಥೆ ಹಲವಾರು ವರ್ಷಗಳಿಂದ ಮುಂದಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ತಿಳಿಸಿದರು.

ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ರೋಟರಿ ಕ್ಲಬ್ ಸಂಸ್ಥಾಪನ ದಿನದ ಅಂಗವಾಗಿ ಪಥ ಸಂಚಲನದಲ್ಲಿ ಭಾಗವಹಿಸುವ ವಿಶೇಷಚೇತನ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಿ ಅವರು ಮಾತನಾಡಿದರು.

ಮಕ್ಕಳು ವಿಕಲರಾಗದಂತೆ ಬಾಲ್ಯಾವಸ್ಥೆಯಿಂದಲೇ ಪಲ್ಸ್ ಪೊಲೀಯೋ ಲಸಿಕೆ ನೀಡುವುದು, ಸರ್ಕಾರಿ ಹಾಗೂ ವಿಶೇಷಚೇತನ ಶಾಲೆಯ ಮಕ್ಕಳಿಗೆ ಕ್ರೀಡಾಸಾಮಾಗ್ರಿ, ಚಳಿಗಾಲದಲ್ಲಿ ಸ್ವೆಟರ್ ವಿತರಣೆ ಸೇರಿದಂತೆ ಫಲಾಪೇಕ್ಷೆ ಯಿಲ್ಲದೇ ಸಂಸ್ಥೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನೆಡೆಯುತ್ತಿದೆ ಎಂದರು.

ಪ್ರಸ್ತುತ ಕದ್ರಿಮಿದ್ರಿ ಸಮೀಪದ ಜೀವನ ಸಂಧ್ಯಾ ವೃದ್ದಾಶ್ರಮದ ಜವಾಬ್ದಾರಿ ಹಾಗೂ ರೋಟರಿ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸುವ ಜೊತೆಗೆ ನಿರ್ವಹಣೆಯ ಮುಖ್ಯಸ್ಥಿಕೆಯನ್ನು ವಹಿಸಿಕೊಂಡು ಬಡಜನತೆಯ ಪರವಾಗಿ ಸ್ಪಂದಿಸುತ್ತಿದೆ. ಅಲ್ಲದೇ ವಿಶ್ವಾದ್ಯಂತ ಬಹುತೇಕ ದೇಶಗಳಲ್ಲಿ ಆಶಕ್ತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ಎನ್.ಪಿ.ಲಿಖಿತ್ ಮಾತನಾಡಿ, ೧೯೫೮ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊAಡ ಸಂಸ್ಥೆ ಜನಸ್ನೇಹಿಯಾಗಿ ದುಡಿಯುತ್ತಿದೆ. ಜೊತೆಗೆ ತಾಲೂಕಿನ ಹಂಪಾಪುರ ಶಾಲೆಗೆ ೬೦೦ ಶೆಟ್ವರ್, ಬೊಗಸೆ ಶಾಲೆಗೆ ಕ್ರೀಡಾಸಾಮಾಗ್ರಿ, ಪಾದರಕ್ಷೆ ಒದಗಿಸಿದೆ. ಮುಂದೆ ೫೦ಕ್ಕೂ ಹಸಿರು ಬೋರ್ಡ್ಗಳನ್ನು ಶಾಲೆಗಳಿಗೆ ವಿತರಿಸುವ ಗುರಿಯಿದೆ ಎಂದರು.

ಅAಧಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷö್ಮಣಗೌಡ ಮಾತನಾಡಿ, ಆಶಾಕಿರಣ ವಿದ್ಯಾರ್ಥಿಗಳು ಅಂತರಾಷ್ಟಿçÃಯ ಮಟ್ಟದ ಕ್ರೀಡಾಕೂಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈ ನಡುವೆ ಮಧ್ಯಾಹ್ನ ಊಟ ಹಾಗೂ ಇತರೆ ಸೌಲಭ್ಯಗಳಿಗೆ ಸರ್ಕಾರದ ಹೆಚ್ಚಿನ ಬೆಂಬಲದ ಅಗತ್ಯವನ್ನು ಪೂರೈಸಿದರೆ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ಶಾಲೆಯ ಸಭಾಂಗಣದಲ್ಲಿ ಕೇಕ್ ಕತ್ತರಿಸಿ ವಿಶ್ವ ರೋಟರಿ ದಿನವನ್ನು ಆಚರಿಸಲಾಯಿತು. ಬಳಿಕ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳು, ವಿಶೇಷಚೇತನ ಮಕ್ಕಳು ಉಪಸ್ಥಿತರಿದ್ದರು.